Tuesday, October 27, 2026
Homeತಾಜಾ ಸುದ್ದಿಡೆಲಿವರಿ ಬಾಯ್‌ಗೆ ಸ್ಕೂಟರ್ ಗಿಫ್ಟ್ ನೀಡಿದ ಅನಂತ್ ಅಂಬಾನಿ!

ಡೆಲಿವರಿ ಬಾಯ್‌ಗೆ ಸ್ಕೂಟರ್ ಗಿಫ್ಟ್ ನೀಡಿದ ಅನಂತ್ ಅಂಬಾನಿ!

- Advertisement -
- Advertisement -

ನವದೆಹಲಿ: ಸೈಕಲ್‌ನಲ್ಲಿ ಆರ್ಡರ್ ವಿತರಿಸುತ್ತಿದ್ದ ಬ್ಲಿಂಕಿಟ್ ಡೆಲಿವರಿ ಬಾಯ್‌ಗೆ ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಹೊಚ್ಚ ಹೊಸ ಸ್ಕೂಟರ್‌ ಉಡುಗೊರೆಯಾಗಿ ನೀಡುವ ಮೂಲಕ ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮುಂಬೈ ರಸ್ತೆಯಲ್ಲಿ ಸೈಕಲ್‌ನಲ್ಲಿ ತೆರಳುತ್ತಿದ್ದ ಡೆಲಿವರಿ ಏಜೆಂಟ್ ಸುಜೀತ್ ಅವರನ್ನು ಪ್ರಭಾವಿ ಹುಸೇನ್ ಮನ್ಸೂರಿ ತಡೆದು, ಬೈಕ್ ಬಳಸದಿರಲು ಕಾರಣ ಕೇಳಿದ್ದಾರೆ. “ಕಡಿಮೆ ಸಂಪಾದನೆಯಲ್ಲಿ ಬೈಕ್ ಕೊಳ್ಳುವುದು ಕಷ್ಟ” ಎಂದು ಸುಜೀತ್ ಅಳಲು ತೋಡಿಕೊಂಡಿದ್ದಾರೆ.

ಆರ್ಡರ್ ಮುಗಿಸಿ ವಾಪಸ್ ಬಂದ ಸುಜೀತ್ ಅವರ ಕಣ್ಣಿಗೆ ಬಟ್ಟೆ ಕಟ್ಟಿ, ಅನಂತ್ ಅಂಬಾನಿ ಅವರ ಪರವಾಗಿ ಕೆಂಪು ಕವರ್‌ನಲ್ಲಿದ್ದ ಹೊಸ ಸ್ಕೂಟಿಯನ್ನು ಸರ್‌ಪ್ರೈಸ್ ಗಿಫ್ಟ್ ಆಗಿ ನೀಡಲಾಗಿದೆ. ಉಡುಗೊರೆ ಕಂಡು ಭಾವುಕರಾದ ಡೆಲಿವರಿ ಬಾಯ್ ಖುಷಿಯಿಂದ ಕಣ್ಣೀರಿಟ್ಟಿದ್ದಾರೆ.

- Advertisement -

Latest News

error: Content is protected !!