Tuesday, October 27, 2026
Homeಕರಾವಳಿಬಂಟ್ವಾಳದ ಗ್ರಾಮವೊಂದರಲ್ಲಿ ಬೃಹತ್ ಹೆಬ್ಬಾವು ಪತ್ತೆ: ಸ್ಥಳೀಯ ನಿವಾಸಿಗಳಲ್ಲಿ ಆತಂಕ

ಬಂಟ್ವಾಳದ ಗ್ರಾಮವೊಂದರಲ್ಲಿ ಬೃಹತ್ ಹೆಬ್ಬಾವು ಪತ್ತೆ: ಸ್ಥಳೀಯ ನಿವಾಸಿಗಳಲ್ಲಿ ಆತಂಕ

- Advertisement -
- Advertisement -

ಬಂಟ್ವಾಳ: ಅಮ್ಟಾಡಿ ಗ್ರಾಮದ ಕಾಜಿಪಿಟ್ಲು ಪ್ರದೇಶದಲ್ಲಿ ಬೃಹತ್ ಹೆಬ್ಬಾವೊಂದು ಬೆಕ್ಕೊಂದನ್ನು ಹಿಡಿದು ಪೊದೆಯೊಳಗೆ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

ಕೆಲವು ದಿನಗಳ ಹಿಂದೆ ಬೆಕ್ಕುಗಳು ಮತ್ತು ನಾಯಿಗಳು ನಾಪತ್ತೆಯಾಗಿರುವುದು ಸ್ಥಳೀಯ ನಿವಾಸಿಗಳಲ್ಲಿ ಆತಂಕವನ್ನು ಉಂಟುಮಾಡಿದ್ದು, ಇದೀಗ ಇದರ ಬೆನ್ನಲ್ಲೇ ಬೃಹತ್‌ ಹೆಬ್ಬಾವು ಕಂಡುಬಂದಿರುವುದು ಸ್ಥಳೀಯ ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿದೆ.

ಈಗಾಗಲೇ ಹಲವು ಬೆಕ್ಕುಗಳು ನಾಪತ್ತೆಯಾಗಿರುವುದರಿಂದ, ಈ ಹೆಬ್ಬಾವು ಸುತ್ತಮುತ್ತಲಿನ ಪ್ರದೇಶದಲ್ಲೇ ಅಡಗಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

- Advertisement -

Latest News

error: Content is protected !!