Tuesday, October 13, 2026
Homeಕರಾವಳಿಮಂಗಳೂರು ವಿಮಾನ ನಿಲ್ದಾಣದಲ್ಲಿ ಟೂರಿಸ್ಟ್ ವಾಹನಗಳಿಗೆ ದುಬಾರಿ ಶುಲ್ಕ: 10 ದಿನಗಳಲ್ಲಿ ವಸೂಲಿ ನಿಲ್ಲಿಸದಿದ್ದರೆ ಧರಣಿ...

ಮಂಗಳೂರು ವಿಮಾನ ನಿಲ್ದಾಣದಲ್ಲಿ ಟೂರಿಸ್ಟ್ ವಾಹನಗಳಿಗೆ ದುಬಾರಿ ಶುಲ್ಕ: 10 ದಿನಗಳಲ್ಲಿ ವಸೂಲಿ ನಿಲ್ಲಿಸದಿದ್ದರೆ ಧರಣಿ ಎಚ್ಚರಿಕೆ

- Advertisement -
- Advertisement -

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೂರಿಸ್ಟ್ ವಾಹನಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ದಕ್ಷಿಣ ಕನ್ನಡ ಟ್ಯಾಕ್ಸಿಮೆನ್ಸ್ ಆ್ಯಂಡ್ ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್, 10 ದಿನಗಳೊಳಗೆ ಶುಲ್ಕ ವಸೂಲಿ ನಿಲ್ಲಿಸದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಮಂಗಳವಾರ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‌ನ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ರಘುಪತಿ ಭಟ್, ವಿಮಾನ ನಿಲ್ದಾಣದ ನಿರ್ವಹಣೆ ನೋಡಿಕೊಳ್ಳುತ್ತಿರುವ ಅದಾನಿ ಸಂಸ್ಥೆಯು ಟೂರಿಸ್ಟ್ ವಾಹನಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಟೂರಿಸ್ಟ್ ವಾಹನಗಳು ಪಾರ್ಕಿಂಗ್ ಲಾಟ್‌ಗೆ ತೆರಳದಿದ್ದರೂ ಪ್ರಯಾಣಿಕರನ್ನು ಪಿಕ್‌ಅಪ್ ಮಾಡುವ ಸಂದರ್ಭದಲ್ಲಿ ₹180 ಶುಲ್ಕ ಪಾವತಿಸಬೇಕಾಗಿದೆ. ಈ ಕುರಿತು ಕಾವೂರು ಜಂಕ್ಷನ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ, ಅದಾನಿ ಸಂಸ್ಥೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಅಕ್ಟೋಬರ್ 1ರಿಂದ ಪ್ರಯಾಣಿಕರನ್ನು ಡ್ರಾಪ್ ಮಾಡಿ ಹೊರಬರುವ ಟೂರಿಸ್ಟ್ ವಾಹನಗಳಿಂದಲೂ ₹50 ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ ಖಾಸಗಿ ವಾಹನಗಳಿಗೆ ಈ ಶುಲ್ಕ ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದರು.

ಬೆಂಗಳೂರು, ಮುಂಬೈ ಸೇರಿದಂತೆ ದೇಶದ ಇತರ ವಿಮಾನ ನಿಲ್ದಾಣಗಳಲ್ಲಿ ಈ ರೀತಿಯ ಶುಲ್ಕ ವಸೂಲಿ ಮಾಡುತ್ತಿಲ್ಲ ಎಂದು ಹೇಳಿದ ರಘುಪತಿ ಭಟ್, ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ಪ್ರಯಾಣಿಕರನ್ನು ಡ್ರಾಪ್ ಮಾಡಲು 10 ನಿಮಿಷಗಳವರೆಗೆ ಶುಲ್ಕ ವಿಧಿಸಬಾರದು. ಬಳಿಕ ₹100 ಶುಲ್ಕ ವಿಧಿಸಿದರೂ ಪಾವತಿಸಲು ಟೂರಿಸ್ಟ್ ವಾಹನಗಳ ಮಾಲಕರು ಸಿದ್ಧರಿದ್ದಾರೆ ಎಂದರು.

ಅಸೋಸಿಯೇಷನ್‌ನಲ್ಲಿ ಉಡುಪಿಯ 4,000 ಹಾಗೂ ದಕ್ಷಿಣ ಕನ್ನಡದ 2,500 ಸೇರಿದಂತೆ ಒಟ್ಟು 6,500 ಟೂರಿಸ್ಟ್ ಟ್ಯಾಕ್ಸಿ ಚಾಲಕರು ನೋಂದಾಯಿಸಿಕೊಂಡಿದ್ದಾರೆ. ಕಾಸರಗೋಡು, ಮಡಿಕೇರಿ ಹಾಗೂ ಭಟ್ಕಳದಿಂದಲೂ ವಾಹನಗಳು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತವೆ. ಹೀಗಾಗಿ, ಜಿಲ್ಲಾಡಳಿತ ಮತ್ತು ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. 10 ದಿನಗಳೊಳಗೆ ಹೆಚ್ಚುವರಿ ಶುಲ್ಕ ವಸೂಲಿ ನಿಲ್ಲಿಸದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್‌ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಆನಂದ ಕೆ. ಸೇರಿದಂತೆ ಪದಾಧಿಕಾರಿಗಳಾದ ಸುರೇಶ್ ಸಾಲ್ಯಾನ್, ರಮೇಶ್ ಕೆ. ಕೋಟ್ಯಾನ್, ಹರೀಶ್ ಶೆಟ್ಟಿ ಕುತ್ತಾರು, ರಾಜೇಶ್ ಉರ್ವಸ್ಟೋರ್, ಅಝೀಝ್ ದೇರಳಕಟ್ಟೆ, ಕರುಣಾಕರ್ ಕುಂಟಿಕಾನ ಹಾಗೂ ರೋಶನ್ ಕಿನ್ನಿಗೋಳಿ ಉಪಸ್ಥಿತರಿದ್ದ

- Advertisement -

Latest News

error: Content is protected !!