Tuesday, October 13, 2026
Homeಕರಾವಳಿಲೀವ್-ಇನ್ ಪ್ರಿಯಕರ ಎಸ್ಕೇಪ್! ; ವಿಷ ಸೇವಿಸಿ ಯುವತಿ ಆತ್ಮಹತ್ಯೆಗೆ ಯತ್ನ

ಲೀವ್-ಇನ್ ಪ್ರಿಯಕರ ಎಸ್ಕೇಪ್! ; ವಿಷ ಸೇವಿಸಿ ಯುವತಿ ಆತ್ಮಹತ್ಯೆಗೆ ಯತ್ನ

- Advertisement -
- Advertisement -

ಬೆಂಗಳೂರು: ಅಂತರ್ಜಾತಿ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಪ್ರಿಯತಮೆಗೆ ಕೈಕೊಟ್ಟು ಪ್ರಿಯಕರ ನಾಪತ್ತೆಯಾಗಿರುವ ಹಾಗೂ ಇದರಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಲ್ಲೇಸೋಮಹಳ್ಳಿ ಗ್ರಾಮದ ಸೂರ್ಯ (26) ಹಾಗೂ ಕಾಸರಗೋಡು ಮೂಲದ ನಿಷ್ಮಾ (26) ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಒಟ್ಟಿಗೆ ವಾಸವಿದ್ದು, ಕಳೆದ ಐದು ತಿಂಗಳಿಂದ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಈ ವಿಷಯ ಸೂರ್ಯನ ಪೋಷಕರಿಗೂ ತಿಳಿದಿದ್ದು, ಆರಂಭದಲ್ಲಿ ಮದುವೆಗೆ ಒಪ್ಪಿದ್ದರು ಎನ್ನಲಾಗಿದೆ. ಆದರೆ, ಯುವತಿಯ ತಾಯಿ ಮದುವೆಗೆ ನಿರಾಕರಿಸಿ ಮಗಳೊಂದಿಗೆ ಸಂಪರ್ಕ ಕಡಿದುಕೊಂಡಿದ್ದರು.

ಸ್ನೇಹಿತನ ಪ್ರಚೋದನೆ ಮತ್ತು ಪ್ರಿಯಕರ ನಾಪತ್ತೆ: ಸೂರ್ಯನ ಸ್ನೇಹಿತ ಪ್ರವೀಣ್ ಎಂಬವರು ಸೂರ್ಯನ ಪೋಷಕರಿಗೆ ನಿಷ್ಮಾ ಅವರ ವಿರುದ್ಧ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿದ್ದು, ಇದರಿಂದಾಗಿ ಸೂರ್ಯನ ಪೋಷಕರು ಮದುವೆಗೆ ಈಗ ನಿರಾಕರಿಸುತ್ತಿದ್ದಾರೆ ಎಂದು ನಿಷ್ಮಾ ಆರೋಪಿಸಿದ್ದಾರೆ. ಕಳೆದ ಸೆಪ್ಟೆಂಬರ್ 24ರಿಂದ ಸೂರ್ಯ ತನ್ನ ಮೊಬೈಲ್ ಫೋನ್ ಅನ್ನು ಅಲ್ಲೇ ಬಿಟ್ಟು ನಾಪತ್ತೆಯಾಗಿದ್ದಾನೆ. ಆತನ ಪೋಷಕರನ್ನು ಸಂಪರ್ಕಿಸಿ ವಿಚಾರಿಸಿದಾಗ, “ನನಗೇನು ಗೊತ್ತಿಲ್ಲ, ಪದೇ ಪದೇ ಫೋನ್ ಮಾಡಿದರೆ ಸರಿ ಇರಲ್ಲ” ಎಂದು ಬೆದರಿಕೆ ಹಾಕಿದ್ದಾರೆ ಹಾಗೂ ಯುವತಿಯ ವಿರುದ್ಧವೇ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಣ್ಣೀರಿನ ವೀಡಿಯೋ ಮತ್ತು ಆತ್ಮಹತ್ಯೆ ಯತ್ನ: ಪ್ರಿಯಕರನ ವಂಚನೆ ಮತ್ತು ಪೋಷಕರ ಬೆದರಿಕೆಯಿಂದ ತೀವ್ರವಾಗಿ ಮನನೊಂದ ನಿಷ್ಮಾ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ವೀಡಿಯೋ ಮಾಡಿರುವ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದು, “ಬರುವ ಗುರುವಾರದವರೆಗೂ ಕಾಯುತ್ತೇನೆ. ಸೂರ್ಯ ಬಂದು ನನ್ನನ್ನು ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಕಳೆದ ಹದಿನೈದು ದಿನಗಳಿಂದ ಊಟ, ನಿದ್ದೆ ಇಲ್ಲದೆ ಸಾಯುತ್ತಿದ್ದೇನೆ. ಮದುವೆಯಾಗುವುದಾಗಿ ನಂಬಿಸಿ ನನಗೆ ಮೋಸ ಮಾಡಿದ್ದಾನೆ. ನನ್ನ ಸಾವಿಗೆ ಸೂರ್ಯ, ಆತನ ಪೋಷಕರು ಹಾಗೂ ಪ್ರವೀಣ್ ಕಾರಣ” ಎಂದು ಕಣ್ಣೀರಿಟ್ಟಿದ್ದಾರೆ. ಈ ಸಂಬಂಧ ಸಂತ್ರಸ್ತೆ ನಿಷ್ಮಾ ಅವರು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!