Sunday, October 11, 2026
Homeಕರಾವಳಿಮಂಗಳೂರುಮಂಗಳೂರು: ಮಾಡೆಲಿಂಗ್ ನೆಪದಲ್ಲಿ ಯುವ ವೈದ್ಯೆಗೆ ಲಕ್ಷಾಂತರ ರೂ. ವಂಚನೆ

ಮಂಗಳೂರು: ಮಾಡೆಲಿಂಗ್ ನೆಪದಲ್ಲಿ ಯುವ ವೈದ್ಯೆಗೆ ಲಕ್ಷಾಂತರ ರೂ. ವಂಚನೆ

- Advertisement -
- Advertisement -

ಮಂಗಳೂರು: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ, ಮಾಡೆಲಿಂಗ್ ಹಾಗೂ ಫೋಟೋ ಶೂಟ್ ಮಾಡಿಸುವುದಾಗಿ ನಂಬಿಸಿ ಯುವ ವೈದ್ಯೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ನಗದು ಮತ್ತು ಚಿನ್ನಾಭರಣ ವಂಚಿಸಿರುವ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಡಾ. ಅಶ್ವಿನ್ ಶೆಟ್ಟಿ ಎಂಬ ಹೆಸರಿನಲ್ಲಿ ಪರಿಚಯವಾದ ವ್ಯಕ್ತಿಯು, ಮಂಗಳೂರಿಗೆ ಕಪ್ಪು ಹಣವಿರುವ ಬ್ಯಾಗ್‌ಗಳು ಬರುತ್ತಿವೆ ಎಂದು ನಂಬಿಸಿ ಮುಂಗಡ ಹಣ ಹಾಗೂ ಆದಾಯ ತೆರಿಗೆ ಸಮಸ್ಯೆ ಪರಿಹರಿಸುವ ನೆಪದಲ್ಲಿ ಹಂತ ಹಂತವಾಗಿ ಹಣ ಪಡೆದಿದ್ದಾನೆ.

ವಿವಿಧ ಬ್ಯಾಂಕ್ ಖಾತೆಗಳು ಹಾಗೂ ನಗದು ರೂಪದಲ್ಲಿ ಒಟ್ಟು 10,20,000 ರೂ., 32 ಗ್ರಾಂ ಚಿನ್ನಾಭರಣ ಹಾಗೂ 1,35,000 ರೂ. ಮೌಲ್ಯದ ಮೊಬೈಲ್ ಫೋನ್ ಅನ್ನು ಪಡೆದು ವಂಚಿಸಿದ್ದಾನೆ. ಅಲ್ಲದೆ, ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಮ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!