- Advertisement -
- Advertisement -
ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಶ್ರೀ ಕ್ಷೇತ್ರ ಮುಂಡೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ 26ನೇ ವರ್ಷದ ನವರಾತ್ರಿ ಉತ್ಸವವು ಅಕ್ಟೋಬರ್ 11 ಭಾನುವಾರದಿಂದ ಅಕ್ಟೋಬರ್ 20 ಮಂಗಳವಾರದವರೆಗೆ ವಿಜೃಂಭಣೆಯಿಂದ ಜರುಗಲಿದೆ.
ನವರಾತ್ರಿ ಉತ್ಸವದ ಅಂಗವಾಗಿ ಪ್ರತಿ ದಿನ ರಾತ್ರಿ 7.00 ರಿಂದ 8.00 ರವರೆಗೆ ಭಜನೆ ಹಾಗೂ ಅಮ್ಮನವರಿಗೆ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ವಿಶೇಷ ಕಾರ್ಯಕ್ರಮ ಅಕ್ಟೋಬರ್ 15 ಗುರುವಾರ ಬೆಳಿಗ್ಗೆ ಚಂಡಿಕಾ ಹೋಮ ಜರುಗಲಿದೆ,ಅಕ್ಟೋಬರ್ 20 ಮಂಗಳವಾರ,ಬೆಳಿಗ್ಗೆ 9.30 ಕ್ಕೆ ವಾಹನ ಪೂಜೆ, ಮಧ್ಯಾಹ್ನ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನೆರವೇರಲಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸರ್ವ ಭಕ್ತಾದಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಧರ್ಮದರ್ಶಿ ಗಳಾದ ಶ್ರೀ ಎಂ. ಆನಂದ ಗೌಡ ಹಾಗೂ ಊರ-ಪರವೂರಿನ ಭಕ್ತವೃಂದದವರು ಸರ್ವರಿಗೂ ಆದರದ ಆಮಂತ್ರಣವನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -


