Saturday, October 10, 2026
Homeಕರಾವಳಿವೇಣೂರು ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಕರಿ ಚಿರತೆ

ವೇಣೂರು ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಕರಿ ಚಿರತೆ

- Advertisement -
- Advertisement -

ಬೆಳ್ತಂಗಡಿ : ಶಿರ್ಲಾಲು ಗ್ರಾಮದ ಮಣಿಲ ಎಂಬಲ್ಲಿಯ ಪದ್ಮನಾಭ ಇವರ ಮನೆಯ ಸಮೀಪ ದಲ್ಲಿ ಅರಣ್ಯ ಇಲಾಖೆ ವೇಣೂರು ವಲಯ ಅರಣ್ಯ ಇಲಾಖೆಯ ವತಿಯಿಂದ ಕೆಲವು ದಿನದ ಇರಿಸಲಾದ ಬೋನಿಗೆ ಸುಮಾರು 3 ವರ್ಷದ ಗಂಡು ಕರಿ ಚಿರತೆಯೊಂದು ಅ.10 ರಂದು ಬಿದ್ದು ಸೆರೆಯಾಗಿದೆ.

ಕಾರ್ಯಾಚರಣೆಯಲ್ಲಿ ಅಳದಂಗಡಿ ವಲಯ ಅರಣ್ಯ ಇಲಾಖೆ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಗಸ್ತು ವನಪಾಲಕ ಮಂಜುನಾಥ್ ಬಿ ಎಸ್, ಅರಣ್ಯ ವೀಕ್ಷಕ ರಾದ ವೆಂಕಪ್ಪ ನಾಯ್ಕ, ಪೂವಪ್ಪ ನಾಯ್ಕ ಹಾಗೂ ಸ್ಥಳೀಯ ರು ಭಾಗವಹಿಸಿದ್ದರು, ಕರಿ ಚಿರತೆಯು ಅರೋಗ್ಯವಾಗಿದ್ದು ಇಲಾಖೆಯ ಪಶು ವೈದ್ಯರಿಂದ ಪರೀಕ್ಷೆಗೊಳಪಡಿಸಿ ಬಳಿಕ ಸುರಕ್ಷಿತವಾಗಿ ಸಂರಕ್ಷಿತಾರಣ್ಯ ಕ್ಕೆ ಬಿಡಲಾಗುವುದೆಂದು ವೇಣೂರು ವಲಯ ಅರಣ್ಯ ಅಧಿಕಾರಿ ಭರತ್ ಯು ಜಿ ತಿಳಿಸಿದ್ದಾರೆ.

- Advertisement -

Latest News

error: Content is protected !!