Thursday, October 1, 2026
Homeಮಹಾನ್ಯೂಸ್ಹೆತ್ತ ಮಗುವನ್ನೇ ಮಾರಿ ಸ್ಮಾರ್ಟ್ ಫೋನ್, ಚಿನ್ನ ಕೊಂಡ ಪಾಪಿ ತಾಯಿ

ಹೆತ್ತ ಮಗುವನ್ನೇ ಮಾರಿ ಸ್ಮಾರ್ಟ್ ಫೋನ್, ಚಿನ್ನ ಕೊಂಡ ಪಾಪಿ ತಾಯಿ

- Advertisement -
- Advertisement -

ಮಹಾರಾಷ್ಟ್ರ;ಹೊಸ ಸ್ಮಾರ್ಟ್‌ಫೋನ್ ಹಾಗೂ ಚಿನ್ನದ ಆಭರಣ ಕೊಳ್ಳುವ ಆಸೆಗೆ ಒಂಬತ್ತು ತಿಂಗಳು ಹೊತ್ತು ಹೆತ್ತ ಒಂದು ತಿಂಗಳ ಹಸಗೂಸನ್ನೇ 1.20 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ಕಟುಕ ತಾಯಿ ಸೇರಿದಂತೆ ಒಟ್ಟು 7 ಮಂದಿ ಶಿಶು ಮಾರಾಟ ಜಾಲದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಮುಕುಂದವಾಡಿಯ ವಂದನಾ ಕಾಂಬ್ಳೆ ಬಂಧಿತ ತಾಯಿ. ಈಕೆ ತನ್ನ ಲಿವ್-ಇನ್ ಸಂಗಾತಿ ಯೋಗೇಶ್ ಜೊತೆ ಸೇರಿ ಜುಲೈ 5ರಂದು ಜನಿಸಿದ್ದ ಗಂಡು ಮಗುವನ್ನು ಮಧ್ಯವರ್ತಿಗಳ ಮೂಲಕ 1.20 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಳು. ಮಗುವನ್ನು ಮಾರಿ ಬಂದ ಹಣದಲ್ಲಿ ಆಕೆ 25,000 ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಹಾಗೂ 62,000 ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಸಿ ಮೆರೆದಿದ್ದಳು.

ಇತ್ತ 1.20 ಲಕ್ಷ ರೂಪಾಯಿಗೆ ಕೈಬದಲಾಗಿದ್ದ ಮಗು ಮಧ್ಯವರ್ತಿಗಳ ಜಾಲದ ಮೂಲಕ ನಾಂದೇಡ್, ಹೈದರಾಬಾದ್ ವರೆಗೆ ಸುಮಾರು 550 ಕಿಲೋಮೀಟರ್ ದೂರ ಸಾಗಿ 3.50 ಲಕ್ಷ ರೂಪಾಯಿಗೆ ನಾಲ್ಕು ಕೈ ಬದಲಾಗಿತ್ತು. ಸೆಪ್ಟೆಂಬರ್ 20ರಂದು ಆರೋಪಿ ತಾಯಿ ವಂದನಾ “ನನ್ನ ಮಗುವನ್ನು ಕಿಡ್ನಾಪ್ ಮಾಡಲಾಗಿದೆ” ಎಂದು ಪೊಲೀಸರಿಗೆ ಸುಳ್ಳು ದೂರು ನೀಡಲು ಹೋಗಿ ತಾನೇ ಹೆಣೆದ ಸಂಚಿನಲ್ಲಿ ಸಿಕ್ಕಿಬಿದ್ದಿದ್ದಾಳೆ.

ಪ್ರಕರಣದ ತನಿಖೆ ನಡೆಸಿದ ಮುಕುಂದವಾಡಿ ಪೊಲೀಸರು ಹೈದರಾಬಾದ್‌ನಿಂದ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿ ಮಕ್ಕಳ ಪಾಲನಾ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ. ಹೆತ್ತ ತಾಯಿ, ಆಕೆಯ ಸಂಗಾತಿ, ಮಧ್ಯವರ್ತಿಗಳು ಹಾಗೂ ನಕಲಿ ವೈದ್ಯ ಸೇರಿದಂತೆ 7 ಜನರನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ ಸ್ಮಾರ್ಟ್‌ಫೋನ್ ಮತ್ತು ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.

- Advertisement -

Latest News

error: Content is protected !!