- Advertisement -
- Advertisement -
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2025 ಹಾಗೂ 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
2025ನೇ ಸಾಲಿಗೆ ಪ್ರೊ. ಬಿ. ಶಿವರಾಮ ಶೆಟ್ಟಿ (ಸಾಹಿತ್ಯ/ಸಂಶೋಧನೆ), ಕುಡ್ಡು ಕೊರಗ (ಜಾನಪದ) ಹಾಗೂ ಉಷಾ ಭಂಡಾರಿ, ಬೆಂಗಳೂರು (ನಾಟಕ/ಸಿನೆಮಾ) ಆಯ್ಕೆಯಾಗಿದ್ದಾರೆ.
2026ನೇ ಸಾಲಿಗೆ ಕೆ.ಪಿ. ರಾವ್ (ಸಾಹಿತ್ಯ/ಸಂಶೋಧನೆ), ನೇಮು ಪರವ (ಜಾನಪದ) ಹಾಗೂ ಸುಧಾಕರ ಬನ್ನಂಜೆ, ಬೆಂಗಳೂರು (ನಾಟಕ/ಸಿನೆಮಾ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ₹50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಅ.4ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.
- Advertisement -


