Friday, September 25, 2026
Homeಕರಾವಳಿಮೈಸೂರು ದಸರಾದಲ್ಲಿ ಕರಾವಳಿ ಕಂಬಳ: ಅ.18, 19ರಂದು ಆಯೋಜನೆ

ಮೈಸೂರು ದಸರಾದಲ್ಲಿ ಕರಾವಳಿ ಕಂಬಳ: ಅ.18, 19ರಂದು ಆಯೋಜನೆ

- Advertisement -
- Advertisement -

ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ಅ.18 ಮತ್ತು 19ರಂದು ಮೈಸೂರಿನ ಸುಮಾರು 20 ಎಕರೆ ಪ್ರದೇಶದಲ್ಲಿ ‘ವಿಜಯ ದಶಮಿ’ ಹೆಸರಿನ ಕರೆಯಲ್ಲಿ ಸರ್ಕಾರದ ವತಿಯಿಂದ ಆಯೋಜಿಸಲಾಗುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕಕಾಲದಲ್ಲಿ 15 ಸಾವಿರ ಮಂದಿ ವೀಕ್ಷಿಸಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಿಸಲಾಗುತ್ತಿದೆ. ಪ್ರೇಕ್ಷಕರಿಗೆ ಮೂರು ಬ್ಯಾಚ್‌ಗಳಲ್ಲಿ ಪಾಸ್ ವ್ಯವಸ್ಥೆ ಮಾಡಲಾಗುತ್ತದೆ. ಕರಾವಳಿಯ ಕೋಣಗಳ ಮಾಲೀಕರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ ಎಂದರು.

ಅ.16ರಂದು ಪುತ್ತೂರಿನಿಂದ ಕೋಣಗಳ ಪ್ರಯಾಣ ಆರಂಭವಾಗಲಿದ್ದು, ಮಡಿಕೇರಿಯಲ್ಲಿ ವಿರಾಮದ ಬಳಿಕ ರಾತ್ರಿ ಮೈಸೂರಿಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ. ಅ.17ರಂದು ವಿಶ್ರಾಂತಿ ನೀಡಿ, ಅ.18ರಂದು ಕಂಬಳ ಉದ್ಘಾಟನೆ ನಡೆಯಲಿದೆ. ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಭಾಗವಹಿಸುವ ಕೋಣಗಳ ಮಾಲೀಕರಿಗೆ ಸರ್ಕಾರದಿಂದ ದೊಡ್ಡ ಜೋಡಿಗೆ ₹65 ಸಾವಿರ ಹಾಗೂ ಸಣ್ಣ ಜೋಡಿಗೆ ₹50 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ. ಸುಮಾರು 150ರಿಂದ 160 ಕೋಣಗಳನ್ನು ಆಯ್ಕೆ ಮಾಡುವ ಉದ್ದೇಶವಿದ್ದು, ಮಾಲೀಕರಿಗೆ ದಸರಾ ಪ್ರಮಾಣಪತ್ರ, ಸ್ಮರಣಿಕೆ ಹಾಗೂ ವಿಶೇಷ ಗೌರವ ನೀಡಲಾಗುತ್ತದೆ. ಬಹುಮಾನ ಮೊತ್ತ ಹೆಚ್ಚಿಸುವ ಕುರಿತು ಮೈಸೂರು ದಸರಾ ಸಮಿತಿ ನಿರ್ಧಾರ ಕೈಗೊಳ್ಳಲಿದೆ ಎಂದು ಅಶೋಕ್ ರೈ ತಿಳಿಸಿದರು.

- Advertisement -

Latest News

error: Content is protected !!