Saturday, September 19, 2026
Homeತಾಜಾ ಸುದ್ದಿ7 ತಿಂಗಳ ಕಂದಮ್ಮನ ಮೇಲೆ ಪಿಟ್ ಬುಲ್ ನಾಯಿ ದಾಳಿ

7 ತಿಂಗಳ ಕಂದಮ್ಮನ ಮೇಲೆ ಪಿಟ್ ಬುಲ್ ನಾಯಿ ದಾಳಿ

- Advertisement -
- Advertisement -

ಹರಿಯಾಣದ ಸೋನಿಪತ್‌ನ ಸಿಕ್ಕಾ ಕಾಲೋನಿಯಲ್ಲಿ ಸಾಕು ಪಿಟ್‌ಬುಲ್ ನಾಯಿಯೊಂದು 7 ತಿಂಗಳ ಕಂದಮ್ಮನ ಮೇಲೆ ಭೀಕರವಾಗಿ ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ.

ಮಗುವನ್ನು ಅತ್ತೆ ವಾಯುವಿಹಾರಕ್ಕೆ ಕರೆತಂದಿದ್ದಾಗ ನೆರೆಮನೆಯ ಗೇಟ್ తెರೆದು ಹೊರಬಂದ ಪಿಟ್‌ಬುಲ್, ಏಕಾಏಕಿ ಅವರ ಮೇಲೆ ಎರಗಿದೆ. ನಾಯಿಯ ದಾಳಿಯ ರಭಸಕ್ಕೆ ಇಬ್ಬರೂ ಕೆಳಗೆ ಬಿದ್ದಿದ್ದು, ನಾಯಿ ಮಗುವನ್ನು ಬಾಯಲ್ಲಿ ಕಚ್ಚಿಕೊಂಡು ರಸ್ತೆಯುದ್ದಕ್ಕೂ ಎಳೆದೊಯ್ದಿದೆ. ಈ ಭಯಾನಕ ದೃಶ್ಯ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದಾಳಿಯಿಂದ ಮಗುವಿನ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರ ಗಾಯಗಳಾಗಿ, ಕರುಳು ಹೊರಬಂದಿತ್ತು. ತಕ್ಷಣವೇ ಮಗುವನ್ನು ರೋಹ್ಟಕ್‌ನ PGIMS ಆಸ್ಪತ್ರೆಗೆ ದಾಖಲಿಸಲಾಯಿತು. ಹಿರಿಯ ವೈದ್ಯ ಡಾ. ಕುಂದನ್ ಮಿತ್ತಲ್ ನೇತೃತ್ವದ ತಂಡ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಪ್ರಾಣಾಪಾಯದಿಂದ ರಕ್ಷಿಸಿದೆ. ಸದ್ಯ ಮಗುವಿಗೆ ಟ್ಯೂಬ್ ಮೂಲಕ ಆಹಾರ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದೆ.

ದೂರು ನೀಡದ ಕುಟುಂಬ: “ಆಪತ್ತಿನ ಸಮಯದಲ್ಲಿ ನಾಯಿಯ ಮಾಲೀಕರು ನಮಗೆ ಸಹಾಯ ಮಾಡಿ ಆಸ್ಪತ್ರೆಗೆ ಜೊತೆಯಾಗಿದ್ದರಿಂದ ಅವರ ವಿರುದ್ಧ ದೂರು ನೀಡುತ್ತಿಲ್ಲ. ಆದರೆ ಸರ್ಕಾರ ಇಂತಹ ಅಪಾಯಕಾರಿ ತಳಿಯ ನಾಯಿಗಳನ್ನು ನಿಷೇಧಿಸಬೇಕು” ಎಂದು ಮಗುವಿನ ತಂದೆ ಕೈಲಾಶ್ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಮಹಾರಾಷ್ಟ್ರದ ಜಾಲ್ನಾದಲ್ಲಿ 2 ವರ್ಷದ ಮಗುವಿನ ಮೇಲೆ ಬೀದಿ ನಾಯಿ ಹಾಗೂ ಪಂಜಾಬ್‌ನ ಪಟಿಯಾಲದಲ್ಲಿ ದಂಪತಿ ಮೇಲೆ ಪಿಟ್‌ಬುಲ್ ದಾಳಿ ನಡೆಸಿರುವುದು ವರದಿಯಾಗಿದೆ. ಈಗಾಗಲೇ ಘಾಜಿಯಾಬಾದ್ ಮತ್ತು ಚಂಡೀಗಢಗಳಲ್ಲಿ ಪಿಟ್‌ಬುಲ್ ಸಾಕಣೆಯನ್ನು ನಿಷೇಧಿಸಲಾಗಿದ್ದು, ದೇಶಾದ್ಯಂತ ಕಠಿಣ ನಿಯಮ ಜಾರಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!