Saturday, September 19, 2026
Homeಕರಾವಳಿಚಲಿಸುತ್ತಿದ್ದ ಮಾರುತಿ ಕಾರಿಗೆ ಬೆಂಕಿ; ಅಪಾಯದಿಂದ ಪಾರಾದ ಚಾಲಕ

ಚಲಿಸುತ್ತಿದ್ದ ಮಾರುತಿ ಕಾರಿಗೆ ಬೆಂಕಿ; ಅಪಾಯದಿಂದ ಪಾರಾದ ಚಾಲಕ

- Advertisement -
- Advertisement -

ಕಾಸರಗೋಡಿನ ನೆಲ್ಲಿಕಟ್ಟೆ ರಸ್ತೆಯ ಅದ್ರುಂಗುಳಿ ಎಂಬಲ್ಲಿ ಶುಕ್ರವಾರ ರಾತ್ರಿ ಚಲಿಸುತ್ತಿದ್ದ ಮಾರುತಿ ಕಾರೊಂದಕ್ಕೆ ದಿಢೀರ್ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟುಹೋದ ಘಟನೆ ನಡೆದಿದೆ.

ಅದ್ರುಂಗುಳಿ ರಸ್ತೆಯಲ್ಲಿ ಕಾರು ಚಲಿಸುತ್ತಿದ್ದ ವೇಳೆ ಇಂಜಿನ್‌ನಿಂದ ದಟ್ಟ ಹೊಗೆ ಬರುತ್ತಿರುವುದನ್ನು ಚಾಲಕ ಅಶ್ರಫ್ ಗಮನಿಸಿದ್ದಾರೆ. ಕೂಡಲೇ ಕಾರನ್ನು ನಿಲ್ಲಿಸಲು ಬ್ರೇಕ್ ಹಾಕಿದರೂ ಬ್ರೇಕ್ ವಿಫಲವಾಗಿದೆ ಎನ್ನಲಾಗಿದೆ. ಪರಿಣಾಮ ಕಾರು ಹಿಂದಕ್ಕೆ ಚಲಿಸಿ ರಸ್ತೆ ಬದಿಯ ಕಾಂಕ್ರೀಟ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ.

ತಕ್ಷಣ ಸೀಟ್‌ಬೆಲ್ಟ್ ಬಿಚ್ಚಿಕೊಂಡು ಕಾರಿನಿಂದ ಹೊರಗೆ ಜಿಗಿದ ಅಶ್ರಫ್ ಅಪಾಯದಿಂದ ಪಾರಾಗಿದ್ದಾರೆ. ಅವರು ಕಾರಿನಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆ ಸಂಪೂರ್ಣವಾಗಿ ಸುಟ್ಟುಹೋಗಿದೆ.

- Advertisement -

Latest News

error: Content is protected !!