Saturday, September 19, 2026
HomeUncategorizedತುಳು ಭಾಷೆಗೆ ಸ್ಥಾನಮಾನ ರಾಜ್ಯ ಸರ್ಕಾರದ ಸರ್ವ ಶ್ರೇಷ್ಠ ಸಾಧನೆ: ಸಂತೋಷ್ ಕುಮಾರ್

ತುಳು ಭಾಷೆಗೆ ಸ್ಥಾನಮಾನ ರಾಜ್ಯ ಸರ್ಕಾರದ ಸರ್ವ ಶ್ರೇಷ್ಠ ಸಾಧನೆ: ಸಂತೋಷ್ ಕುಮಾರ್

- Advertisement -
- Advertisement -

ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆದಿದ್ರಾವಿಡ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಮುಖ್ಯಮಂತ್ರಿ ‌ಡಿ. ಕೆ. ಘೋಷಿಸಿರುವುದು ಈ ಸರಕಾರದ ಸರ್ವ ಶ್ರೇಷ್ಠ ‌ಸಾಧನೆ ಹಾಗೂ ಐತಿಹಾಸಿಕ ನಿರ್ಧಾರ,ತುಳುನಾಡಿನ ಭವ್ಯ ಪರಂಪರೆಯನ್ನು ರಾಜ್ಯ ಸರಕಾರ ಎತ್ತಿ ಹಿಡಿದಿದೆ.

ಈ ಮೂಲಕ ಕರಾವಳಿಯ ಕಲೆ, ಜಾನಪದ, ಸಂಸ್ಕೃತಿ ಹಾಗೂ ಇಲ್ಲಿನ ಭಾಷೆಗೆ ಅಧಿಕೃತ ಮನ್ನಣೆ ದೊರೆತಿರುವುದು ಸಂತೋಷದ ವಿಚಾರ. ಈ ಮಹತ್ತರ ಕಾರ್ಯವನ್ನು ‌ಮಾಡಿದ ಮುಖ್ಯಮಂತ್ರಿಗಳಿಗೆ‌ ಅಭಿನಂದನೆಗಳು. ಅದೇ ರೀತಿ‌ ಪುತ್ತೂರು, ಕನ್ಯಾಡಿ ಸೇರಿದಂತೆ ಕರಾವಳಿಯ ಧಾರ್ಮಿಕ ‌ಕ್ಷೇತ್ರಗಳ ಅಭಿವೃದ್ಧಿಗೂ‌ ಕೋಟಿ ವೆಚ್ಚದ ಅನುದಾನಗಳನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಸರಕಾರ ಬದ್ಧತೆ‌ ಪ್ರದರ್ಶಿಸಿದೆ. ವಿಶೇಷ ಸಂಪುಟ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರವು ತುಳುನಾಡಿನ ಜನರ ಭಾವನೆಗಳಿಗೆ ಸಕಾಲದಲ್ಲಿ ಸ್ಪಂದಿಸಿದೆ. ಈ ಮೂಲಕ ಜಗತ್ತಿನ ಮೂಲೆ‌ ಮೂಲೆಯಲ್ಲಿರುವ ತುಳುವರು, ತುಳು ಭಾಷೆಯನ್ನು ಮಾತನಾಡುವವರು, ಸಾಹಿತಿಗಳು, ಸಂಘ ಸಂಸ್ಥೆಗಳ ಸದಸ್ಯರು, ಕರಾವಳಿ ಪ್ರಾಂತ್ಯದ ಜನತೆ ಸಂತಸ ಪಡುವಂತಾಗಿದೆ. ಸೌಹಾರ್ದತೆಯ ಸ್ಥಾನ, ದೇವಾಲಯಗಳ ಬೀಡಾದ ಕರಾವಳಿಯ ಸರ್ವರೂ ಮುಖ್ಯಮಂತ್ರಿಗಳ‌ ಈ ಕಾರ್ಯವನ್ನು ಶ್ಲಾಘಿಸಬೇಕಿದೆ ಎಂದು ದ.ಕ. ಜಿಲ್ಲಾ ಕೆ.ಡಿ.ಪಿ. ಸದಸ್ಯರಾದ ಸಂತೋಷ್ ಕುಮಾರ್ ಲಾಯಿಲಾ ಹೇಳಿಕೆ ನೀಡಿದ್ದಾರೆ.

- Advertisement -

Latest News

error: Content is protected !!