Friday, September 11, 2026
Homeಕರಾವಳಿಉಡುಪಿಉಡುಪಿ: 'ಹುಡುಕಬೇಡಿ, ಮದುವೆಯಾಗುತ್ತಿದ್ದೇನೆ' ಎಂದು ಪತ್ರ ಬರೆದಿಟ್ಟು ಯುವತಿ ನಾಪತ್ತೆ

ಉಡುಪಿ: ‘ಹುಡುಕಬೇಡಿ, ಮದುವೆಯಾಗುತ್ತಿದ್ದೇನೆ’ ಎಂದು ಪತ್ರ ಬರೆದಿಟ್ಟು ಯುವತಿ ನಾಪತ್ತೆ

- Advertisement -
- Advertisement -

ಉಡುಪಿ: ತಾನು ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗುತ್ತಿದ್ದು, ತನ್ನನ್ನು ಯಾರೂ ಹುಡುಕಬೇಡಿ ಎಂದು ಪತ್ರ ಬರೆದಿಟ್ಟು 18 ವರ್ಷದ ಯುವತಿಯೊಬ್ಬಳು ಮನೆಯಿಂದ ಕಾಣೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಕಿನ್ನಿಮುಲ್ಕಿಯ ವೇಗಸ್ ಟೌನ್‌ಶಿಪ್ ನಿವಾಸಿ ಪೂಜಾ (18) ನಾಪತ್ತೆಯಾದ ಯುವತಿ. ಸೆಪ್ಟೆಂಬರ್ 6 ರಂದು ಮಧ್ಯರಾತ್ರಿ ವೇಳೆ ಈಕೆ ಮನೆಯಿಂದ ತೆರಳಿದ್ದಾಳೆ.

ಸುಮಾರು 4 ಅಡಿ 8 ಇಂಚು ಎತ್ತರ, ಗೋಧಿ ಮೈಬಣ್ಣ ಹಾಗೂ ಸಾಧಾರಣ ಶರೀರ ಹೊಂದಿರುವ ಈಕೆ ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾಳೆ. ಈ ಯುವತಿಯ ಬಗ್ಗೆ ಯಾವುದೇ ಮಾಹಿತಿ ಲಭಿಸಿದಲ್ಲಿ ಸಾರ್ವಜನಿಕರು ಉಡುಪಿ ನಗರ ಪೊಲೀಸ್ ಠಾಣೆ (0820-2520444), ಕಂಟ್ರೋಲ್ ರೂಂ (0820-2526444), ಪೊಲೀಸ್ ಇನ್ಸ್‌ಪೆಕ್ಟರ್ (9480805408) ಅಥವಾ ಸಬ್-ಇನ್ಸ್‌ಪೆಕ್ಟರ್ (9080805445) ಅವರನ್ನು ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.

- Advertisement -

Latest News

error: Content is protected !!