ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ವಿರುದ್ಧ ನಾಗರಿಕ ಸೇವಾ ಟ್ರಸ್ಟ್ನ ರಂಜನ್ ರಾವ್ ಯೆರ್ದೂರ್ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ರಿಟ್ ಅರ್ಜಿಯನ್ನು ರಂಜನ್ ರಾವ್ ಯೆರ್ದೂರ್ SKDRDP ಸಂಸ್ಥೆಯು ಕಾನೂನುಬಾಹಿರವಾಗಿ ಬಡ್ಡಿ ದಂಧೆ ನಡೆಸುತ್ತಿದೆ, ಮನಿ ಲೆಂಡರ್ಸ್ ಕಾಯ್ದೆ ಉಲ್ಲಂಘಿಸುತ್ತಿದೆ ಮತ್ತು ವಂಚನೆ (IPC 420) ಎಸಗುತ್ತಿದೆ ಎಂದು ಹಾಕಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.
ಹೈಕೋರ್ಟ್ ಆದೇಶ: ಬೆಳ್ತಂಗಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಬಳಿಕ ಈ ದೂರನ್ನು ಪ್ರಶ್ನಿಸಿ SKDRDP ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು. ಸುದೀರ್ಘ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಜನವರಿ 9, 2026 ರಂದು ರಂಜನ್ ರಾವ್ ಅವರು ನೀಡಿದ್ದ ದೂರನ್ನು ವಜಾಗೊಳಿಸಿ (Quash), SKDRDP ಪರವಾಗಿ ತೀರ್ಪು ನೀಡಿತ್ತು.
ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ: ಹೈಕೋರ್ಟ್ನ ಈ ಆದೇಶವನ್ನು ಪ್ರಶ್ನಿಸಿ ರಂಜನ್ ರಾವ್ ಯೆರ್ದೂರ್ ಅವರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ (ಪ್ರಕರಣದ ಸಂಖ್ಯೆ: SLP(Crl) No. 10752/2026
ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅರ್ಜಿದಾರರ ಆರೋಪ ಕ್ಕೆ ಸಾಕ್ಷಿ ಇಲ್ಲ ಎಂದು ಸೆ.8 ರಂದು ರಿಟ್ ಅರ್ಜಿಯನ್ನೇ ವಜಾಗೊಳಿಸಿದೆ.


