Wednesday, September 2, 2026
Homeಕರಾವಳಿರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ

ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ

- Advertisement -
- Advertisement -

ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪೊಸೊಳಿಕೆಯಲ್ಲಿ ಸೆಪ್ಟೆಂಬರ್ 2ರಂದು ಬೆಳಗಿನ ಜಾವ ಭಾರೀ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಸ್ಥಳೀಯ ನಿವಾಸಿ ಪಿ. ಕೆ. ಜೋಬ್ ಅವರಿಗೆ ಸೇರಿದ ರಬ್ಬರ್ ಒಣಗಿಸುವ ‘ಸ್ಮೋಕ್ ಹೌಸ್’ಗಳು ಸಂಪೂರ್ಣವಾಗಿ ಭಸ್ಮವಾಗಿವೆ.

ಮನೆಯ ಸಮೀಪವೇ ಇದ್ದ ಎರಡು ಸ್ಮೋಕ್ ಹೌಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅದನ್ನು ನಂದಿಸಲು ತೀವ್ರ ಯತ್ನ ನಡೆಸಲಾಯಿತಾದರೂ, ಬೆಂಕಿಯ ತೀವ್ರತೆಗೆ ಕಟ್ಟಡಗಳು ಪೂರ್ಣವಾಗಿ ಆಹುತಿಯಾಗಿವೆ.

ಈ ದುರಂತದಲ್ಲಿ ಒಣಗಿಸಲು ಹಾಕಿದ್ದ ಅಪಾರ ಪ್ರಮಾಣದ ರಬ್ಬರ್ ಶೀಟ್‌ಗಳು ಹಾಗೂ ಕಟ್ಟಡದೊಳಗಿದ್ದ ಮರಮಟ್ಟುಗಳು ಸುಟ್ಟು ಕರಕಲಾಗಿದ್ದು, ಸುಮಾರು 5 ರಿಂದ 6 ಲಕ್ಷ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

- Advertisement -

Latest News

error: Content is protected !!