Wednesday, August 26, 2026
Homeತಾಜಾ ಸುದ್ದಿನೇಪಾಳದಲ್ಲಿ ಭೀಕರ ಪ್ರವಾಹ; ಕೊಚ್ಚಿ ಹೋದ ಹಳ್ಳಿಗಳು

ನೇಪಾಳದಲ್ಲಿ ಭೀಕರ ಪ್ರವಾಹ; ಕೊಚ್ಚಿ ಹೋದ ಹಳ್ಳಿಗಳು

- Advertisement -
- Advertisement -

ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು ಹಳ್ಳಿಗಳು ಕೊಚ್ಚಿ ಹೋಗಿ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.

ಟಿಬೆಟ್ ಗಡಿಯಲ್ಲಿರುವ ರುಸುವಾ ಜಿಲ್ಲೆಯ ಪರ್ವತ ಪ್ರದೇಶಗಳಾದ ಸಯಾಪು ಬೇಸಿ ಹಾಗೂ ತಿಮುರೆ ಭಾಗಗಳಲ್ಲಿ ಪ್ರವಾಹದ ತೀವ್ರತೆ ಹೆಚ್ಚಾಗಿ ಹಾನಿ ಸಂಭವಿಸಿದೆ.

ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎತ್ತರದ ಪ್ರದೇಶಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ನದಿ ತೀರದ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆಗೆ ನೇಪಾಳ ಪೊಲೀಸರು ಹಾಗೂ ಮಿಲಿಟರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ಗ್ರಾಮಗಳು ಕೊಚ್ಚಿಹೋಗಿರುವುದರಿಂದ ಜನ ಜೀವನ ತುಂಬಾ ಅಸ್ತವ್ಯಸ್ತಗೊಂಡಿದೆ.

ಮಳೆಯ ಪ್ರಮಾಣ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಆತಂಕ ಎದುರಾಗಿದ್ದು, ನೇಪಾಳ ಪ್ರಧಾನಮಂತ್ರಿ ಬ್ಯಾಲೇಂದ್ರ ಶಾ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೂರವಾಣಿ ಮಾತುಕತೆ ನಡೆಸಿದ್ದು ನೆರವಿನ ಭರವಸೆ ನೀಡಿದ್ದಾರೆ.

- Advertisement -

Latest News

error: Content is protected !!