Wednesday, August 26, 2026
Homeತಾಜಾ ಸುದ್ದಿಉಚಿತ ಸಾಮೂಹಿಕ ವಿವಾಹದಲ್ಲಿ ಜೋಡಿಗೆ ಶಾಸಕರಿಂದ ಹನಿಮೂನ್ ಗೆ ಹಣ ಮತ್ತು ಸೀಮೆ ಹಸು ಗಿಫ್ಟ್

ಉಚಿತ ಸಾಮೂಹಿಕ ವಿವಾಹದಲ್ಲಿ ಜೋಡಿಗೆ ಶಾಸಕರಿಂದ ಹನಿಮೂನ್ ಗೆ ಹಣ ಮತ್ತು ಸೀಮೆ ಹಸು ಗಿಫ್ಟ್

- Advertisement -
- Advertisement -

ಚಿಕ್ಕಬಳ್ಳಾಪುರ: ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾದವರಿಗೆ ಶಾಸಕರೊಬ್ಬರು ಹನಿಮೂನ್ ಗೆ ತೆರಳಲು ಐವತ್ತು ಸಾವಿರ ರೂಪಾಯಿ ಹಣ ಮತ್ತು ಒಂದು ಸೀಮೆ ಹಸು ಉಚಿತವಾಗಿ ಕೊಟ್ಟಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಈ ಉಡುಗೊರೆ ನೀಡಲಾಗಿದ್ದು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡರೆ ಮಾತ್ರ ಈ ಉಚಿತ ಗಿಫ್ಟ್ ಸಿಗಲಿದೆ.

ಇಂದು 125 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ವಧುವಿಗೆ ಚಿನ್ನದ ತಾಳಿ, ಕಾಲುಂಗುರ, ವರನಿಗೆ 50 ಸಾವಿರ ರೂಪಾಯಿ, ವಧು ವರ ಹಾಗೂ ಅವರ ತಂದೆ ತಾಯಿಗೆ ರೇಷ್ಮೆ ಬಟ್ಟೆಗಳನ್ನು ಕೂಡಾ ಶಾಸಕರು ನೀಡಿದ್ದಾರೆ.

ಇದೇ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ. ಸುರೇಶ್ ಕೆಎಂಎಫ್ ನ ನಂದಿನಿ ಉತ್ಪನ್ನಗಳನ್ನೇ ಬಳಸುವಂತೆ ಪ್ರಮೋಷನ್ ಕೂಡಾ ಮಾಡಿದರು.

- Advertisement -

Latest News

error: Content is protected !!