Wednesday, August 26, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಖಿಳರ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದ್ ಮಿಲಾದ್

ಬೆಳ್ತಂಗಡಿ : ಖಿಳರ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದ್ ಮಿಲಾದ್

- Advertisement -
- Advertisement -

ಬೆಳ್ತಂಗಡಿ : ಖಿಳರ್ ಜುಮ್ಮಾ ಮಸೀದಿ ಬೆಳ್ತಂಗಡಿಯಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಖತೀಬ್ ಹನೀಫ್ ಫೈಝೀ ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಆ.24 ರಂದು ನಡೆದ ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ಹಾಗೂ ಸಭಾ ಕಾರ್ಯಕ್ರಮ ನಡೆಯಿತು. ಖಿಳರ್ ಜುಮ್ಮಾ ಮಸೀದಿಯ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಮುಖ್ಯ ಅತಿಥಿಯಾಗಿ ಉದ್ಯಮಿ ಹಾರಿಶ್ ಮದ್ದಡ್ಕ ಭಾಗವಹಿಸಿದ್ದರು. ದಾರುಸ್ಸಲಾಂ ಚೇರ್‌ಮನ್ ಜೆಫ್ರಿ ತಂಙಳ್ ದುವಾ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಬಿ.ಎಚ್. ಮಹಮ್ಮದ್, ನಿಕಟಪೂರ್ವ ಅಧ್ಯಕ್ಷ ಬಿ.ಎ. ನಝೀರ್, ಕೋಶಾಧಿಕಾರಿ ಫೈಝಲ್ ಐ.ಜೆ., ಉಪಾಧ್ಯಕ್ಷರಾದ ಬಿ. ಶೇಖುಂಞ, ಮಹಮ್ಮದ್ ಶರೀಫ್, ಕಾರ್ಯದರ್ಶಿ ಹನೀಫ್ ವರ್ಷಾ, ಮಹಮ್ಮದ್ ಕುದ್ರಡ್ಕ, ಇಸ್ಮಾಯಿಲ್ ಐ.ಬಿ., ರಿಝ್ವಾನ್ ಬಿ.ಕೆ., ಹಾರಿಸ್ ಐ.ಜೆ., ನೌಫಲ್ ದಾರಿಮಿ, ಅಬ್ದುಲ್ ರಹಮಾನ್ ಮದನಿ, ಸಾಲಾತ್ ಕಮಿಟಿ ಅಧ್ಯಕ್ಷ ಹೈದರ್ ಬಿ.ಕೆ., ಕಾರ್ಯದರ್ಶಿ ಕಾದರ್ ಕುದ್ರಡ್ಕ, ಕೋಶಾಧಿಕಾರಿ ಅಬುಸಾಲಿ ಬಿ.ಎ., ಅಬ್ದುಲ್ ರಹಮಾನ್, ಫೈಝಲ್, ಸಿರಾಜ್ ಹಾಗೂ ಅಝೀಝ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಬಿ.ಎಚ್. ರಝಾಕ್ ಸ್ವಾಗತಿಸಿದರು. ಅಬೂಬಕ್ಕರ್ ಸಿದ್ದೀಕ್ ಅಝ್ಹರಿ ವಂದಿಸಿದರು. ಸವಿಲ್ ಅಝ್ಹರಿ ದಾರುಸ್ಸಲಾಂ ಕಾರ್ಯಕ್ರಮ ನಿರೂಪಿಸಿದರು.

- Advertisement -

Latest News

error: Content is protected !!