Tuesday, August 25, 2026
Homeಕರಾವಳಿಮಂಗಳೂರುಪುತ್ತೂರು ಬಂದ್ ಸುಳ್ಳು ಸುದ್ದಿ: ವಾಟ್ಸಾಪ್‌ ಖಾತೆದಾರನ ವಿರುದ್ಧ ಪ್ರಕರಣ ದಾಖಲು

ಪುತ್ತೂರು ಬಂದ್ ಸುಳ್ಳು ಸುದ್ದಿ: ವಾಟ್ಸಾಪ್‌ ಖಾತೆದಾರನ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಪುತ್ತೂರು: ರಾಜಕೀಯ ಪಕ್ಷವೊಂದರ ಹೆಸರಿನಲ್ಲಿ ಆ.26 ರಂದು ‘ಪುತ್ತೂರು ಬಂದ್’ ನಡೆಸಲು ಸವಾಲು ಹಾಕಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹಾಗೂ ಸಾರ್ವಜನಿಕ ಶಾಂತಿ ಕದಡುವಂತಹ ಸುಳ್ಳು ಸುದ್ದಿ ಪ್ರಸಾರ ಮಾಡಿದ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜುನಾಥ್ ಎಂಬ ಹೆಸರಿನ ವಾಟ್ಸಾಪ್‌ ಖಾತೆ ಹೊಂದಿರುವ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 353(2) ರಡಿಯಲ್ಲಿ (ಅಕ್ರ:103/2026) ಕೇಸ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!