Tuesday, August 25, 2026
Homeಕರಾವಳಿಮಂಗಳೂರುವಿಟ್ಲ: ಕೋಟಿಕೆರೆಯಲ್ಲಿ ಈಜಲು ತೆರಳಿದ್ದ ಬ್ಯಾಂಕ್ ಉದ್ಯೋಗಿ ನೀರಿನಲ್ಲಿ ಮುಳುಗಿ ಸಾವು

ವಿಟ್ಲ: ಕೋಟಿಕೆರೆಯಲ್ಲಿ ಈಜಲು ತೆರಳಿದ್ದ ಬ್ಯಾಂಕ್ ಉದ್ಯೋಗಿ ನೀರಿನಲ್ಲಿ ಮುಳುಗಿ ಸಾವು

- Advertisement -
- Advertisement -

ವಿಟ್ಲ: ಸ್ಥಳೀಯ ಕೋಟಿಕೆರೆಯಲ್ಲಿ ಈಜಲೆಂದು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ.

ವಿಟ್ಲ ಕಸಬಾ ಗ್ರಾಮದ ಗಾಳಿಹಿತ್ತು ನಿವಾಸಿ ವೀರಪ್ಪ ಗೌಡ ಎಂಬುವರ ಪುತ್ರ, ಎಸ್‌ಸಿಡಿಸಿಸಿ (SCDCC) ಬ್ಯಾಂಕ್ ನೌಕರ ಲಿತಿನ್ (32) ಮೃತಪಟ್ಟ ದುರ್ದೈವಿ.

ಮಂಗಳವಾರ ಮುಂಜಾನೆ ಲಿತಿನ್ ಅವರು ಈಜಾಡಲು ಕೋಟಿಕೆರೆಗೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ನೀರಿನ ಆಳಕ್ಕೆ ಜಾರಿ ಮುಳುಗಲಾರಂಭಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ನೀರಿಗೆ ಧುಮುಕಿ ಅವರನ್ನು ದಂಡೆಗೆ ತರಲು ಹರಸಾಹಸ ಪಟ್ಟರಾದರೂ, ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ ಸುದ್ದಿ ತಿಳಿದ ಕೂಡಲೇ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಸ್ಥರ ಕ್ರಂದನ ಮುಗಿಲು ಮುಟ್ಟಿದ್ದು, ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!