Tuesday, August 25, 2026
Homeಪ್ರಮುಖ-ಸುದ್ದಿಕರ್ನಾಟಕದಲ್ಲಿ ವಿಷಕಾರಿ ಧತ್ತೂರ ಹಣ್ಣು ಮಾರಾಟ: ಬಿಗ್‌ಬಾಸ್ಕೆಟ್‌, ಅಮೆಜಾನ್‌, ಸ್ವಿಗ್ಗಿ ಸೇರಿದಂತೆ ಹಲವು ಕಂಪೆನಿಗಳ ಆಹಾರ...

ಕರ್ನಾಟಕದಲ್ಲಿ ವಿಷಕಾರಿ ಧತ್ತೂರ ಹಣ್ಣು ಮಾರಾಟ: ಬಿಗ್‌ಬಾಸ್ಕೆಟ್‌, ಅಮೆಜಾನ್‌, ಸ್ವಿಗ್ಗಿ ಸೇರಿದಂತೆ ಹಲವು ಕಂಪೆನಿಗಳ ಆಹಾರ ಲೈಸನ್ಸ್‌ ಸಸ್ಪೆಂಡ್‌!

- Advertisement -
- Advertisement -

ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಹಾಗೂ ಬಿಗ್‌ಬಾಸ್ಕೆಟ್ ಸಂಸ್ಥೆಗಳ ಆಹಾರ ಪರವಾನಗಿಯನ್ನು ಅಮಾನತುಗೊಳಿಸಿ ಕಠಿಣ ಆದೇಶ ಹೊರಡಿಸಿದೆ.

ಈ ಆನ್‌ಲೈನ್ ತ್ವರಿತ ವಾಣಿಜ್ಯ ಪ್ಲಾಟ್‌ಫಾರ್ಮ್‌ಗಳಲ್ಲಿ ಅತ್ಯಂತ ವಿಷಕಾರಿಯಾದ ಧತ್ತೂರ ಹಣ್ಣು ಮತ್ತು ಬೀಜಗಳನ್ನು FSSAI ಲೇಬಲ್‌ನೊಂದಿಗೆ ಮಾನವ ಬಳಕೆಯ ಆಹಾರ ಪದಾರ್ಥವೆಂದು ತೋರಿಸಿ ಮಾರಾಟ ಮಾಡುತ್ತಿದ್ದುದು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಇಲಾಖೆಯು ಇ-ಕಾಮರ್ಸ್ ಸಂಸ್ಥೆಗಳ ವಿರುದ್ಧ ಸಮರ ಸಾರಿದೆ.

ಸಾರ್ವಜನಿಕರ ಆರೋಗ್ಯ ಭದ್ರತೆಯ ಹಿತದೃಷ್ಟಿಯಿಂದ ಈ ಸಂಸ್ಥೆಗಳು ತಮ್ಮ ಆಪ್‌ಗಳಲ್ಲಿ ಧತ್ತೂರ ಹಣ್ಣು ಹಾಗೂ ಬೀಜಗಳ ಪ್ರದರ್ಶನ, ಜಾಹೀರಾತು ಮತ್ತು ವಿತರಣೆಯನ್ನು ತಕ್ಷಣವೇ ಸಂಪೂರ್ಣವಾಗಿ ಬಂದ್ ಮಾಡುವಂತೆ ಫುಡ್ ಸೇಫ್ಟಿ ಇಲಾಖೆಯು ಖಡಕ್ ಸೂಚನೆ ನೀಡಿದೆ.

- Advertisement -

Latest News

error: Content is protected !!