- Advertisement -


- Advertisement -
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರ ನೂತನ ಪಟ್ಟಿಯಲ್ಲಿ ಕರ್ನಾಟಕದ ರಾಜ್ಯಸಭಾ ಸದಸ್ಯ ಪ್ರೊ. ಎಂ. ನಾಗರಾಜ ಅವರಿಗೆ ಸ್ಥಾನ ನೀಡಲಾಗಿದೆ.
ಅವರೊಂದಿಗೆ ಮಾಜಿ ಮುಖ್ಯಮಂತ್ರಿಗಳಾದ ವಸುಂಧರಾ ರಾಜೇ ಸಿಂಧಿಯಾ (ರಾಜಸ್ಥಾನ) ಹಾಗೂ ತೀರಥ್ ಸಿಂಗ್ ರಾವತ್ (ಉತ್ತರಾಖಂಡ) ಸೇರಿದಂತೆ ರಾಮ್ ಮಾಧವ್, ಬೈಜಯಂತ್ ಜಯ ಪಾಂಡಾ, ಡಿ. ಪುರಂದೇಶ್ವರಿ, ರೇಖಾ ವರ್ಮಾ, ವರ್ಷಾಬೆನ್ ನರೇಂದ್ರಭಾಯ್ ದೋಷಿ, ಡಾ. ಭಾರತಿ ಪ್ರವೀಣ್ ಪವಾರ್, ಮನ್ಪ್ರೀತ್ ಸಿಂಗ್ ಬಾದಲ್, ಲಾಲ್ ಸಿಂಗ್ ಆರ್ಯ, ಪ್ರೊ. ತಾರಿಖ್ ಮನ್ಸೂರ್ ಮತ್ತು ಡಾ. ಮಧುಚಂದ್ರಾ ಕರ್ ಅವರು ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಇದೇ ವೇಳೆ, ಪಕ್ಷದ ಸಂಘಟನಾತ್ಮಕ ಜವಾಬ್ದಾರಿಗಳಲ್ಲಿ ಬಿ. ಎಲ್. ಸಂತೋಷ್ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆಯಲ್ಲಿಯೇ ಮುಂದುವರಿದಿದ್ದು, ಅವರಿಗೆ ನೆರವಾಗಲು ಶಿವಪ್ರಕಾಶ್ ಹಾಗೂ ಸೌದಾನ್ ಸಿಂಗ್ ಅವರು ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿಗಳಾಗಿ (ಸಂಘಟನೆ) ಕಾರ್ಯನಿರ್ವಹಿಸಲಿದ್ದಾರೆ.
- Advertisement -


