Sunday, August 16, 2026
Homeಕರಾವಳಿಮಂಗಳೂರುಮಂಗಳೂರಿನಲ್ಲಿ ಮೆಕ್ ಡೊನಾಲ್ಡ್ ಮಳಿಗೆ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಂದ ದಾಳಿ

ಮಂಗಳೂರಿನಲ್ಲಿ ಮೆಕ್ ಡೊನಾಲ್ಡ್ ಮಳಿಗೆ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಂದ ದಾಳಿ

- Advertisement -
- Advertisement -

ಮಂಗಳೂರು: ಆಹಾರ ಸುರಕ್ಷತಾ ಇಲಾಖೆಯಿಂದ ಮಂಗಳೂರಿನಲ್ಲಿ ಪರಿಶೀಲನೆ ಮುಂದುವರಿದಿದೆ. ಮೆಕ್ ಡೊನಾಲ್ಡ್ ಮಳಿಗೆಯಲ್ಲಿ ಇಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ಮೆಕ್ ಡೊನಾಲ್ಡ್ ಮಳಿಗೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ.ಪ್ರವೀಣ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಕಿಚನ್ ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಪರಿಶೀಲನೆ ಬಳಿಕ‌ ಕಿಚನ್ ನಲ್ಲಿ ಬನ್ ಮತ್ತು ಬ್ರೆಡ್ ಗಳ‌ ಸ್ಯಾಂಪಲ್ ಗಳನ್ನು ಅಧಿಕಾರಿಗಳು ಸಂಗ್ರಹ ಮಾಡಿದ್ದು, ಯಾವುದೇ ಅವಧಿ ಮುಗಿದಿರುವ ವಸ್ತುಗಳು ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ಕೆ.ಎಸ್. ರಾವ್ ರಸ್ತೆಯಲ್ಲಿರುವ ಕೆಎಫ್ ಸಿ ಮಳಿಗೆಗೆ ದಾಳಿ ನಡೆಸಿದ್ದ ಆಹಾರ ಸುರಕ್ಷಿತಾ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು

- Advertisement -

Latest News

error: Content is protected !!