Sunday, August 16, 2026
Homeಕರಾವಳಿಮಂಗಳೂರುಕನ್ಯಾಡಿ ಶಾಲೆಯಲ್ಲಿ ವಿಜೃಂಭಣೆಯ "ಆಟಿಡೊಂಜಿ ದಿನ": 38 ಬಗೆಯ ಖಾದ್ಯ, ಹಳೆಯ ವಸ್ತುಗಳ ಪ್ರದರ್ಶನ

ಕನ್ಯಾಡಿ ಶಾಲೆಯಲ್ಲಿ ವಿಜೃಂಭಣೆಯ “ಆಟಿಡೊಂಜಿ ದಿನ”: 38 ಬಗೆಯ ಖಾದ್ಯ, ಹಳೆಯ ವಸ್ತುಗಳ ಪ್ರದರ್ಶನ

- Advertisement -
- Advertisement -

ಧರ್ಮಸ್ಥಳ : ( ಆಗಸ್ಟ್ 14) ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ -2 ,ಶಾಲೆಯಲ್ಲಿ “ಆಟಿಡೊಂಜಿ ದಿನ” ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ಕೆ .ನಂದ ಇವರು ತುಳು ಸಂಪ್ರದಾಯದಂತೆ ಕಲಸೆಯಲ್ಲಿ ತೆಂಗಿನ ಮರದ ಹೊಂಬಾಳೆಯನ್ನು ಅರಳಿಸುವ ಮೂಲಕ ಚಾಲನೆ ನೀಡಿ, ಶುಭವನ್ನು ಹಾರೈಸಿದರು.

ವೇದಿಕೆಯಲ್ಲಿನ ಗಣ್ಯರು ಚೆನ್ನೆ ಮಣೆಯ ಆಟದ ಮೂಲಕ ಚಾಲನೆ ನೀಡಿದರು.ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿ ಯಾಗಿ ನಮ್ಮ ಶಾಲೆಯ ಎಸ್ ಡಿ ಎಂ ಸಿ ಯ ಸದಸ್ಯರಾದ ಶ್ರೀಯುತ ರೂಪೇಶ್.ಕೆ ಇವರು “ಆಟಿಡೊಂಜಿ ದಿನ”ದ ವಿಶೇಷತೆಯನ್ನು ಮಕ್ಕಳಿಗೆ ತಿಳಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಶ್ರೀಯುತ ಮನೋಹರ್ ರಾವ್ ಎಸ್. ಡಿ .ಎಂ. ಸಿ . ಯ, ಉಪಾಧ್ಯಕ್ಷೆ ಶ್ರೀಮತಿ ಹೇಮಲತಾ ಮತ್ತು ಸರ್ವ ಸದಸ್ಯರು,ಶಾಲಾ ಶಿಕ್ಷಕ ವೃಂದದವರು, ಅಕ್ಷರದಾಸೋಹ ಸಿಬ್ಬಂದಿ ಪೋಷಕ ವೃಂದ,ಶಾಲೆಯ ಮಕ್ಕಳು ಉಪಸ್ಥಿತರಿದ್ದರು. ತುಳು ಹಾಡುಗಳಿಗೆ ಮಕ್ಕಳು ನೃತ್ಯವನ್ನು ಮಾಡಿ ಮನೋರಂಜಿಸಿದರು. ಪೋಷಕರ ಸಹ ಕಾರದಿಂದ 38 ಬಗೆಯ ಆಟಿ ತಿಂಗಳಲ್ಲಿ ಮಾಡುವ ವಿಶೇಷ ಖಾದ್ಯಗಳನ್ನು ,ಹಳೆಯ ಕಾಲದ ವಸ್ತುಗಳು ಜೊತೆಗೆ ಗಿಡಮೂಲಿಕೆಗಳ ಪ್ರದರ್ಶನವು ಈ ಕಾರ್ಯ ಕ್ರಮದ ವಿಶೇಷ ಆಕರ್ಷಣೆ ಯಾಗಿತ್ತು.ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್ ಸ್ವಾಗತಿಸಿ, ಅಥಿತಿ ಶಿಕ್ಷಕಿ ಶ್ರೀಮತಿ ಭವ್ಯ ವಂದಿಸಿ, ಸಹ ಶಿಕ್ಷಕಿ ಶ್ರೀಮತಿ ಹೇಮಲತಾ ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -

Latest News

error: Content is protected !!