Saturday, August 15, 2026
Homeಕರಾವಳಿಮಂಗಳೂರುಬಂಟ್ವಾಳ: ಜಾನಪದ ಕಲಾವಿದೆ, ದೈವ ನರ್ತಕ ದೇಜಪ್ಪ ಬಾಚಕೆರೆ ಅವರ ಮಾತೃಶ್ರೀ ಪುತ್ತು ನಿಧನ

ಬಂಟ್ವಾಳ: ಜಾನಪದ ಕಲಾವಿದೆ, ದೈವ ನರ್ತಕ ದೇಜಪ್ಪ ಬಾಚಕೆರೆ ಅವರ ಮಾತೃಶ್ರೀ ಪುತ್ತು ನಿಧನ

- Advertisement -
- Advertisement -

ಬಂಟ್ವಾಳ: ಪ್ರಸಿದ್ಧ ದೈವ ನರ್ತಕ ಹಾಗೂ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಅವರ ಮಾತೃಶ್ರೀ, ಹೆಸರಾಂತ ಜಾನಪದ ಕಲಾವಿದೆ ಶ್ರೀಮತಿ ಪುತ್ತು (85) ಅವರು ಶನಿವಾರ ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಕೊನೆಯುಸಿರೆಳೆದಿದ್ದು, ಮೃತರು ನಾಲ್ವರು ಪುತ್ರಿಯರು, ಮೂವರು ಪುತ್ರರು ಹಾಗೂ ಅಪಾರ ಸಂಖ್ಯೆಯ ಮೊಮ್ಮಕ್ಕಳು ಮತ್ತು ಬಂಧು-ಬಳಗವನ್ನು ಅಗಲಿದ್ದಾರೆ.

ಜಾನಪದ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶ್ರೀಮತಿ ಪುತ್ತು ಅವರು, ತಮ್ಮ ಸರಳತೆ ಹಾಗೂ ಸಜ್ಜನಿಕೆಯ ಜೀವನದ ಮೂಲಕ ಸಮಾಜದಲ್ಲಿ ಅಪಾರ ಗೌರವ ಗಳಿಸಿದ್ದರು. ಇವರ ನಿಧನಕ್ಕೆ ಸ್ಥಳೀಯ ಪ್ರಮುಖರು, ಬಂಧು-ಮಿತ್ರರು ಹಾಗೂ ಹಿತೈಷಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

- Advertisement -

Latest News

error: Content is protected !!