Wednesday, August 12, 2026
Homeಕರಾವಳಿಮಂಗಳೂರುಕಡಬ: ಮನೆಯಲ್ಲಿದ್ದ ಫ್ರಿಡ್ಜ್ ಏಕಾಏಕಿ ಭೀಕರವಾಗಿ ಸ್ಫೋಟ; ಮನೆಗೆ ಭಾರೀ ಹಾನಿ, ಮಹಿಳೆ ಪ್ರಾಣಾಪಾಯದಿಂದ ಪಾರು!

ಕಡಬ: ಮನೆಯಲ್ಲಿದ್ದ ಫ್ರಿಡ್ಜ್ ಏಕಾಏಕಿ ಭೀಕರವಾಗಿ ಸ್ಫೋಟ; ಮನೆಗೆ ಭಾರೀ ಹಾನಿ, ಮಹಿಳೆ ಪ್ರಾಣಾಪಾಯದಿಂದ ಪಾರು!

- Advertisement -
- Advertisement -

ಕಡಬ: ರಾಮಕುಂಜ ಗ್ರಾಮದ ಆತೂರಿನಲ್ಲಿ ಮನೆಯಲ್ಲಿದ್ದ ಫ್ರಿಡ್ಜ್‌ ಏಕಾಏಕಿ ಭೀಕರವಾಗಿ ಸ್ಫೋಟಗೊಂಡು ಮನೆಗೆ ಭಾರಿ ಪ್ರಮಾಣದಲ್ಲಿ ಹಾನಿಯಾದ ಘಟನೆ ಆಗಸ್ಟ್ 11ರ ಮಂಗಳವಾರ ಸಂಜೆ ಸಂಭವಿಸಿದೆ.ಆತೂರು ನಿವಾಸಿ, ಪ್ರಸ್ತುತ ವಿದೇಶದಲ್ಲಿ ಉದ್ಯೋಗದಲ್ಲಿರುವ ಸಿದ್ದೀಕ್ ಎಂಬವರ ಮನೆಯಲ್ಲಿ ಈ ದುರಂತ ನಡೆದಿದೆ.

ಆಗಸ್ಟ್ 11ರ ಸಂಜೆಯ ವೇಳೆಗೆ ಮನೆಯಲ್ಲಿದ್ದ ಫ್ರಿಡ್ಜ್ ನಲ್ಲಿ ತಾಂತ್ರಿಕ ದೋಷ ಅಥವಾ ಶಾರ್ಟ್ ಸರ್ಕ್ಯೂಟ್‌ನಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು, ಮೇಲ್ಛಾವಣಿ ಹಾಗೂ ಪೀಠೋಪಕರಣಗಳಿಗೆ ತೀವ್ರ ಹಾನಿಯಾಗಿದೆ. ಅಲ್ಲದೆ, ಸ್ಫೋಟದ ಬೆನ್ನಲ್ಲೇ ಬೆಂಕಿ ವ್ಯಾಪಿಸಿದ್ದರಿಂದ ಮನೆಯಲ್ಲಿದ್ದ ಇತರ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ಘಟನೆ ಸಂಭವಿಸಿದ ವೇಳೆ ಮನೆಯಲ್ಲಿ ಸಿದ್ದೀಕ್ ಅವರ ಪತ್ನಿ ಆರೀಫಾ ಅವರು ಮಾತ್ರ ಇದ್ದರು. ಫ್ರಿಡ್ಜ್ ನಿಂದ ಹೊಗೆ ಹಾಗೂ ಬೆಂಕಿ ಬರುತ್ತಿರುವುದನ್ನು ಗಮನಿಸಿದ ತಕ್ಷಣವೇ ಅವರು ಸಮಯಪ್ರಜ್ಞೆ ಮೆರೆದು ಮನೆಯಿಂದ ಹೊರಗೆ ಬಂದ ಕಾರಣ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯರು ಧಾವಿಸಿ ಬೆಂಕಿ ನಂದಿಸಲು ನೆರವಾಗಿದ್ದಾರೆ.

- Advertisement -

Latest News

error: Content is protected !!