Tuesday, August 11, 2026
Homeಕರಾವಳಿಮಂಗಳೂರುವಿಟ್ಲ: ಗಾಂಜಾ ಸೇವಿಸುತ್ತಿದ್ದ ನಾಲ್ವರ ಬಂಧನ; ಕಾರು ವಶಕ್ಕೆ

ವಿಟ್ಲ: ಗಾಂಜಾ ಸೇವಿಸುತ್ತಿದ್ದ ನಾಲ್ವರ ಬಂಧನ; ಕಾರು ವಶಕ್ಕೆ

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಕಾನತ್ತಡ್ಕದಲ್ಲಿ ಗಾಂಜಾ ಸೇವಿಸುತ್ತಿದ್ದ ನಾಲ್ವರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಕಾನತ್ತಡ್ಕ ನಿವಾಸಿ ನಾಗರಾಜ ಕೆ. (32) ಅವರ ಮನೆಯ ಅಂಗಳದಲ್ಲಿದ್ದ ಅನುಮಾನಾಸ್ಪದ ಕಾರು (KA-17-N-7443) ಕುರಿತು ಮಾಹಿತಿ ಪಡೆದ ವಿಟ್ಲ ಎಸ್‌ಐ ರಾಮಕೃಷ್ಣ ಹಾಗೂ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯ ಜಗಲಿಯಲ್ಲಿ ಕುಳಿತಿದ್ದ ಮನೆ ಮಾಲೀಕ ನಾಗರಾಜ, ಕೊಳ್ನಾಡಿನ ಕುಮಾರ್ ಕೃಷ್ಣ (27), ಕೇಪುವಿನ ಅಬ್ದುಲ್ ಜಲೀಲ್ (40) ಹಾಗೂ ವಿಟ್ಲ ಕಸಬಾದ ಅಬ್ದುಲ್ ಖಾದರ್ ಯು. (31) ಅವರನ್ನು ವಶಕ್ಕೆ ಪಡೆಯಲಾಗಿದೆ.

ವಿಚಾರಣೆ ವೇಳೆ ಕಾರಿನಲ್ಲಿ ಗಾಂಜಾ ತಂದು ಸೇವಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ವೈದ್ಯಕೀಯ ತಪಾಸಣೆಯಲ್ಲಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!