Tuesday, August 11, 2026
Homeಕರಾವಳಿಮಂಗಳೂರುಮಂಗಳೂರು: ತಂಗಿಯ ಸಾವಿನ ಬೆನ್ನಲ್ಲೇ ಲಾಡ್ಜ್‌ನಲ್ಲಿ ಗಲ್ಫ್‌ನಿಂದ ಬಂದ ಸಹೋದರ ಆತ್ಮಹತ್ಯೆ

ಮಂಗಳೂರು: ತಂಗಿಯ ಸಾವಿನ ಬೆನ್ನಲ್ಲೇ ಲಾಡ್ಜ್‌ನಲ್ಲಿ ಗಲ್ಫ್‌ನಿಂದ ಬಂದ ಸಹೋದರ ಆತ್ಮಹತ್ಯೆ

- Advertisement -
- Advertisement -

ಮಂಗಳೂರು: ನೀಟ್ ಮರುಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ತಂಗಿ ಆತ್ಮಹತ್ಯೆಗೆ ಶರಣಾದ ಕೆಲವೇ ತಿಂಗಳುಗಳಲ್ಲಿ, ಗಲ್ಫ್‌ನಿಂದ ಹಿಂತಿರುಗಿದ್ದ ಆಕೆಯ ಸಹೋದರ ಮಂಗಳೂರಿನ ಲಾಡ್ಜ್‌ ಒಂದರಲ್ಲಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ನಡೆದಿದೆ.

ಕೇರಳದ ಬೇಕಲ್ ಮೂಲದ ಅರ್ಜುನ್ ಮಹೇಶ್ (24) ಮೃತ ದುರ್ದೈವಿ. ಕಳೆದ ಜೂನ್‌ನಲ್ಲಿ ಈತನ ತಂಗಿ ಐಜಾ ಆರ್. ಮಹೇಶ್ ಪಾಲಾದ ಕೋಚಿಂಗ್ ಸೆಂಟರ್ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಂಗಿಯ ಅಗಲಿಕೆಯಿಂದ ನೊಂದಿದ್ದ ಅರ್ಜುನ್, ಭಾನುವಾರ ಗಲ್ಫ್‌ನಿಂದ ಮಂಗಳೂರಿಗೆ ವಿಮಾನದಲ್ಲಿ ಬಂದಿಳಿದು ನಾಪತ್ತೆಯಾಗಿದ್ದರು. ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು.

ಸೋಮವಾರ ಮಧ್ಯಾಹ್ನ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮರವೂರಿನ ಲಾಡ್ಜ್ ಕೋಣೆಯಲ್ಲಿ ಅರ್ಜುನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಒಂದೇ ಕುಟುಂಬದ ಇಬ್ಬರು ಮಕ್ಕಳು ದುರಂತ ಅಂತ್ಯ ಕಂಡಿರುವುದು ಸಾರ್ವಜನಿಕರಲ್ಲಿ ತೀವ್ರ ಕಂಬನಿ ತರಿಸಿದೆ. ಬಜ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!