Friday, September 18, 2026
Homeತಾಜಾ ಸುದ್ದಿಹಾಸನ:ರೈಲ್ವೆ ಹಳಿ ಮೇಲಿನ ಮಣ್ಣು ತೆರವು; ಬೆಂಗಳೂರು - ಮಂಗಳೂರು ನಡುವಿನ ರೈಲು ಸಂಚಾರ ಪುನರಾರಂಭ

ಹಾಸನ:ರೈಲ್ವೆ ಹಳಿ ಮೇಲಿನ ಮಣ್ಣು ತೆರವು; ಬೆಂಗಳೂರು – ಮಂಗಳೂರು ನಡುವಿನ ರೈಲು ಸಂಚಾರ ಪುನರಾರಂಭ

- Advertisement -
- Advertisement -

ಹಾಸನ: ಸಕಲೇಶಪುರ ತಾಲೂಕಿನ ಎಡಕುಮಾರಿ ಹಾಗೂ ವಾಗಿಲು ನಡುವೆ ಭಾರಿ ಮಳೆಯಿಂದಾಗಿ ಸಂಭವಿಸಿದ್ದ ಗುಡ್ಡ ಕುಸಿತದ ಮಣ್ಣನ್ನು ರೈಲ್ವೆ ಇಲಾಖೆ ಯಶಸ್ವಿಯಾಗಿ ತೆರವುಗೊಳಿಸಿದ್ದು, ಈ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭಗೊಂಡಿದೆ.

ಶನಿವಾರ ರಾತ್ರಿ ಸುರಿದ ಮಳೆಗೆ ಬೆಟ್ಟದ ಮಣ್ಣು ಮತ್ತು ಬಂಡೆಕಲ್ಲುಗಳು ಹಳಿಯ ಮೇಲೆ ಬಿದ್ದು, ಬೆಂಗಳೂರಿನಿಂದ ಕರಾವಳಿ ಹಾಗೂ ಕೇರಳ ಭಾಗಕ್ಕೆ ಸಂಪರ್ಕ ಕಲ್ಪಿಸುವ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಕಾರ್ಯಪ್ರವೃತ್ತರಾದ ತಾಂತ್ರಿಕ ತಂಡ ಹಾಗೂ ಸಿಬ್ಬಂದಿ, ಪ್ರತಿಕೂಲ ವಾತಾವರಣದ ನಡುವೆಯೂ ಸತತ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಗುಡ್ಡ ಕುಸಿದ ಜಾಗದಲ್ಲಿ ಸುರಕ್ಷತೆಗಾಗಿ 10 ಕಿ.ಮೀ. ವೇಗದ ನಿರ್ಬಂಧ ವಿಧಿಸಲಾಗಿದೆ. ಸ್ಥಿತಿಗತಿ ಸಂಪೂರ್ಣವಾಗಿ ಯಥಾಸ್ಥಿತಿಗೆ ಬಂದ ನಂತರ ಸಾಮಾನ್ಯ ವೇಳಾಪಟ್ಟಿಯಂತೆ ರೈಲುಗಳ ಸಂಚಾರ ಜಾರಿಯಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!