Sunday, August 2, 2026
Homeಕರಾವಳಿಮಂಗಳೂರುಮಂಗಳೂರು: ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ; ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರು!

ಮಂಗಳೂರು: ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ; ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರು!

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯ ಅಬ್ಬರ ಮುಂದುವರಿದಿದ್ದು, ನಗರದ ಮಣ್ಣಗುಡ್ಡೆಯಲ್ಲಿ ಶನಿವಾರ ತಡರಾತ್ರಿ ಬೃಹತ್ ಮರವೊಂದು ಧರೆಗೆುರುಳಿದೆ. ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರನೋರ್ವ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಡರಾತ್ರಿ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಮಣ್ಣಗುಡ್ಡೆಯಲ್ಲಿ ರಸ್ತೆ ಬದಿಯಲ್ಲಿದ್ದ ದೊಡ್ಡ ಮರ ಏಕಾಏಕಿ ಬುಡಸಮೇತ ರಸ್ತೆಗೆ ಬಿದ್ದಿದೆ. ಅದೇ ಕ್ಷಣದಲ್ಲಿ ಆ ಮಾರ್ಗವಾಗಿ ಸಾಗುತ್ತಿದ್ದ ಬೈಕ್ ಸವಾರನ ತೀರಾ ಹತ್ತಿರದಲ್ಲೇ ಮರ ಬಿದ್ದಿದ್ದು, ಸವಾರ ಸಮಯಪ್ರಜ್ಞೆಯಿಂದ ವಾಹನ ನಿಯಂತ್ರಿಸಿ ಅಪಾಯದಿಂದ ಪಾರಾಗಿದ್ದಾರೆ. ಈ ಇಡೀ ಭೀಕರ ಘಟನೆಯ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮರ ಬಿದ್ದ ಪರಿಣಾಮ ಈ ಭಾಗದಲ್ಲಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತಲ್ಲದೆ, ವಿದ್ಯುತ್ ತಂತಿಗಳು ತುಂಡಾಗಿ ವಿದ್ಯುತ್ ಸಂಪರ್ಕದಲ್ಲೂ ವ್ಯತ್ಯಯ ಉಂಟಾಗಿತ್ತು. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಬಿದ್ದಿದ್ದ ಮರವನ್ನು ಕತ್ತರಿಸಿ ತೆರವುಗೊಳಿಸುವ ಮೂಲಕ ರಸ್ತೆ ಸಂಚಾರವನ್ನು ಸುಗಮಗೊಳಿಸಿದ್ದಾರೆ.

- Advertisement -

Latest News

error: Content is protected !!