Thursday, July 30, 2026
Homeಕರಾವಳಿಮಂಗಳೂರುಲಾವಣ್ಯ ಹತ್ಯೆಗೆ ಉಪ್ಪಿನಂಗಡಿಯಲ್ಲಿ ಕತ್ತಿ ಖರೀದಿಸಿದ್ದ ಚೇತನ್; ಕೃಷಿ ಸಲಕರಣೆಗಳ ಮಾರಾಟ ಮಳಿಗೆಯಲ್ಲಿ ಸ್ಥಳ ಮಹಜರು

ಲಾವಣ್ಯ ಹತ್ಯೆಗೆ ಉಪ್ಪಿನಂಗಡಿಯಲ್ಲಿ ಕತ್ತಿ ಖರೀದಿಸಿದ್ದ ಚೇತನ್; ಕೃಷಿ ಸಲಕರಣೆಗಳ ಮಾರಾಟ ಮಳಿಗೆಯಲ್ಲಿ ಸ್ಥಳ ಮಹಜರು

- Advertisement -
- Advertisement -

ಉಪ್ಪಿನಂಗಡಿ: ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ  ಲಾವಣ್ಯಳನ್ನು ಬರ್ಬರವಾಗಿ ಹತ್ಯೆ ಮಾಡಲು ಚೇತನ್ ಬಳಸಿದ್ದ ಕತ್ತಿಯನ್ನು ಖರೀದಿಸಿದ್ದ ಉಪ್ಪಿನಂಗಡಿಯ ಕೃಷಿ ಸಲಕರಣೆಗಳ ಮಾರಾಟ ಮಳಿಗೆಯಲ್ಲಿ ಪೊಲೀಸರು ಆರೋಪಿಯನ್ನು ಕರೆತಂದು ಸ್ಥಳಮಹಜರು ನಡೆಸಿದ್ದಾರೆ.

ಬುಧವಾರದಂದು ತನಿಖಾಧಿಕಾರಿಗಳು ಆರೋಪಿ ಚೇತನ್ ನನ್ನು ಉಪ್ಪಿನಂಗಡಿಯ ಪ್ರಮುಖ ಕೃಷಿ ಸಲಕರಣೆಗಳ ಮಾರಾಟ ಮಳಿಗೆಗೆ ಕರೆತಂದಿದ್ದರು. ಮಳಿಗೆಯಲ್ಲಿದ್ದ ಸಿಬ್ಬಂದಿ ಪೊಲೀಸರ ತನಿಖೆ ಹಾಗೂ ಮಹಜರು ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಿದರು. ಕೊಲೆಯ ಹಿಂದಿನ ದಿನವಾದ ಜುಲೈ 15 ರಂದೇ ಉಪ್ಪಿನಂಗಡಿಗೆ ಆಗಮಿಸಿದ್ದ ಈತ, ಕೃಷಿ ಸಲಕರಣೆಗಳ ಮಾರಾಟ ಮಳಿಗೆಗೆ ಭೇಟಿ ನೀಡಿದ್ದ. ಕೃಷಿಕರು ಬಳಸುವ ಉದ್ದನೆಯ ಕತ್ತಿಯನ್ನು ಪರಿಶೀಲಿಸಿ ಬೆಲೆ ಕೇಳಿದ್ದ. ಬಳಿಕ ಮಳಿಗೆಯಿಂದ ಹೊರಹೋಗಿ ಬೇರೆ ಅಂಗಡಿಗಳಲ್ಲಿ ವಿಚಾರಿಸಲು ಯತ್ನಿಸಿ, ಮರಳಿ ಅದೇ ಮಳಿಗೆಗೆ ಬಂದು ಕತ್ತಿಯನ್ನು ಖರೀದಿಸಿದ್ದ.

ಕಾಗದದಿಂದ ಸುತ್ತಿ ಪ್ಯಾಕ್ ಮಾಡಲಾದ ಕತ್ತಿಯನ್ನು ಮಳಿಗೆಯಲ್ಲೇ ಸ್ವಲ್ಪ ಹೊತ್ತು ಇರಿಸಿ ಹೊರಹೋದಾತ, ಕೆಲ ಸಮಯದ ನಂತರ ಮರಳಿ ಬಂದು ಕತ್ತಿಯನ್ನು ಪಡೆದುಕೊಂಡು ಹೋಗಿದ್ದ. ಈ ಎಲ್ಲಾ ದೃಶ್ಯಾವಳಿಗಳು ಅಂಗಡಿಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು ಪ್ರಮುಖ ಸಾಕ್ಷಿಯಾಗಲಿದೆ. ಪ್ರಕರಣದ ಕುರಿತು ಪೊಲೀಸರು ಸುದೀರ್ಘ ತನಿಖೆ ಮುಂದುವರಿಸಿದ್ದು, ಕಠಿಣ ಕಾನೂನು ಕ್ರಮ ಜರುಗಿಸಲು ಸಾಕ್ಷ್ಯಾಧಾರಗಳನ್ನು ಕಳೆ ಹಾಕುತ್ತಿದ್ದಾರೆ.

- Advertisement -

Latest News

error: Content is protected !!