- Advertisement -


- Advertisement -
ಪುತ್ತೂರು: ಇತ್ತೀಚೆಗೆ ಸಂಭವಿಸಿದ ವಿವಿಧ ಅನಾಹುತಗಳಲ್ಲಿ ತಮ್ಮವರನ್ನು ಕಳೆದುಕೊಂಡ ಸಂತ್ರಸ್ತರ ಮನೆಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಶನಿವಾರ ಭೇಟಿ ನೀಡಿದರು. ಈ ವೇಳೆ ನೊಂದ ಕುಟುಂಬಗಳಿಗೆ ವೈಯಕ್ತಿಕವಾಗಿ ಸಾಂತ್ವನ ಹೇಳಿದ ಅವರು, ಸರ್ಕಾರದ ವತಿಯಿಂದ ಮಂಜೂರಾಗಿರುವ ನಷ್ಟಪರಿಹಾರದ ಅನುಮೋದನಾ ಪತ್ರಗಳನ್ನು ಹಸ್ತಾಂತರಿಸಿದರು.
ವಿತರಿಸಲಾದ ಸರ್ಕಾರದ ಪರಿಹಾರ ಧನದ ವಿವರ:
- ಅವಳಿ ಮಕ್ಕಳ ಸಾವು (ಮುರುಳ್ಯ): ಸುಳ್ಯ ತಾಲೂಕಿನ ಮುರುಳ್ಯದಲ್ಲಿ ಕೆರೆಗೆ ಬಿದ್ದು ದಾರುಣವಾಗಿ ಮೃತಪಟ್ಟ ಅವಳಿ ಮಕ್ಕಳ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ.
- ಲಾವಣ್ಯ ಹತ್ಯೆ ಪ್ರಕರಣ (ಕಕ್ಕೆಪದವು): ಭೀಕರವಾಗಿ ಕೊಲೆಯಾದ ಲಾವಣ್ಯ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ (CMRF) ₹10 ಲಕ್ಷ ನೆರವು.
- ಮರ ಬಿದ್ದು ಬಾಲಕಿ ಸಾವು: ಖಾಸಗಿ ಬಸ್ಸಿನ ಮೇಲೆ ಮರ ಬಿದ್ದು ಅಕಾಲಿಕವಾಗಿ ಕೊನೆಯುಸಿರೆಳೆದ ಬಾಲಕಿ ಚಿರನ್ವಿ ಕುಟುಂಬಕ್ಕೆ ₹5 ಲಕ್ಷ ಪರಿಹಾರ.
ಇನ್ನು ವೇಳೆ ಮಾತನಾಡಿದ ಅವರು ಮಂಜೂರಾಗಿರುವ ಪರಿಹಾರ ಮೊತ್ತವು ಸೋಮವಾರದಂದೇ ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ. ಸಂಕಷ್ಟದ ಸಮಯದಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ನಿಮ್ಮೊಂದಿಗೆ ಸದಾ ಬೆಂಬಲವಾಗಿ ನಿಲ್ಲಲಿವೆ ಎಂದರು.
- Advertisement -


