Saturday, July 25, 2026
Homeಕರಾವಳಿಮಂಗಳೂರುಪುತ್ತೂರು: 15 ವರ್ಷಗಳ ಹಳೆಯ ದರೋಡೆ ಕೇಸ್: ಪ್ರಮುಖ ಆರೋಪಿ ಸಂಪ್ಯದಲ್ಲಿ ಬಂಧನ

ಪುತ್ತೂರು: 15 ವರ್ಷಗಳ ಹಳೆಯ ದರೋಡೆ ಕೇಸ್: ಪ್ರಮುಖ ಆರೋಪಿ ಸಂಪ್ಯದಲ್ಲಿ ಬಂಧನ

- Advertisement -
- Advertisement -

ಪುತ್ತೂರು: 15 ವರ್ಷಗಳ ಹಿಂದೆ ಕಾಸರಗೋಡಿನ ಕುಂಬಳೆಯಲ್ಲಿ ನಡೆದಿದ್ದ ಭೀಕರ ಮನೆ ದರೋಡೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಸಂಪ್ಯದಲ್ಲಿ ಬಂಧಿಸಿದ್ದಾರೆ.

ಸಂಪ್ಯದ ಅಬ್ದುಲ್ ಅಸೀಸ್ (58) ಬಂಧಿತ. 2012ರಲ್ಲಿ ರಾಜೇಶ್ ಶೆಣೈ ಎಂಬವರ ಮನೆಗೆ ನುಗ್ಗಿದ್ದ ದರೋಡೆಕೋರರು, ಬಂದೂಕು ತೋರಿಸಿ ಕುಟುಂಬಸ್ಥರ ಕೈ-ಬಾಯಿ ಕಟ್ಟಿ, 42 ಪವನ್ ಚಿನ್ನ ಹಾಗೂ ₹25,000 ನಗದು ದೋಚಿದ್ದರು.

ಪ್ರಕರಣದ 10 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿತ್ತು. ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಅಸೀಸ್‌ನನ್ನು ಕಾಸರಗೋಡು ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ.

- Advertisement -

Latest News

error: Content is protected !!