- Advertisement -


- Advertisement -
ಮಂಗಳೂರು: ಮೊಬೈಲ್ ಮನೆಯಲ್ಲೇ ಬಿಟ್ಟು ವಿವಾಹಿತೆ ದಿಢೀರ್ ನಾಪತ್ತೆಯಾಗಿರುವ ಘಟನೆ ಲೇಡಿಹಿಲ್ ನಲ್ಲಿ ನಡೆದಿದೆ. ದೇವಮ್ಮ (22) ನಾಪತ್ತೆಯಾಗಿರುವ ವಿವಾಹಿತೆ.
ದೇವಮ್ಮ ಅವರು ಜೂನ್ 15ರಂದು ರಾತ್ರಿ 8:30ರ ಸುಮಾರಿಗೆ ನಗರದ ಲೇಡಿಹಿಲ್ ಬಳಿಯಿರುವ ಅಪಾರ್ಟ್ಮೆಂಟ್‌ನ ತನ್ನ ಮನೆಯಿಂದ ದೇವಮ್ಮ ಅವರು ಹೊರಗೆ ಹೋಗಿದ್ದಾರೆ. ಆದರೆ, ಹೊರಗೆ ಹೋದವರು ತಡರಾತ್ರಿಯಾದರೂ ಮನೆಗೆ ಮರಳಿ ಬಂದಿಲ್ಲ. ಅ ದೇವಮ್ಮ ಅವರು ತಮ್ಮ ಮೊಬೈಲ್ ಫೋನನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಡಿಜಿಟಲ್ ಸಂಪರ್ಕವಿಲ್ಲದೆ ಅವರು ಎಲ್ಲಿಗೆ ಹೋಗಿದ್ದಾರೆ ಎಂಬುದು ಸದ್ಯಕ್ಕೆ ಯಾರಿಗೂ ತಿಳಿದಿಲ್ಲ.
ಈ ಬಗ್ಗೆ ಆಕೆಯ ಪತಿ ಬೀರಪ್ಪಯರಝರಿ ಅವರು ಆತಂಕಗೊಂಡು ತಕ್ಷಣವೇ ಉರ್ವ ಪೊಲೀಸ್ ಠಾಣೆಗೆ ಧಾವಿಸಿ ಲಿಖಿತ ದೂರು ನೀಡಿದ್ದಾರೆ. ಪತಿ ನೀಡಿದ ದೂರಿನ ಮೇರೆಗೆ ಉರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾದ ಮಹಿಳೆಯ ಪತ್ತೆಗಾಗಿ ಶೋಧ ಕಾರ್ಯ ಹಾಗೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ
- Advertisement -


