- Advertisement -


- Advertisement -
ಉಡುಪಿ: ಪೋಕ್ಸೋ ಪ್ರಕರಣದ ಜೈಲು ಸೇರಿದ್ದ ಯುವಕ ಆತ್ಮಹ*ತ್ಯೆಗೆ ಶರಣಾಗಿರುವ ಘಟನೆ ಮಣಿಪಾಲ ಕೆಎಂಸಿ ಕ್ಯಾಂಪಸ್ ಕಾರು ಪಾರ್ಕಿಂಗ್ ಶೆಡ್ನಲ್ಲಿ ನಡೆದಿದೆ. ಸೊರಬ ನಿವಾಸಿ ಬಸವರಾಜ (25) ಮೃತ ಯುವಕ.
ಬಸವರಾಜ್ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿ ಜೈಲಿಗೆ ಹೋಗಿ ಜಾಮೀನಿನಲ್ಲಿ ಬಿಡುಗಡೆಯಾದ ಬಳಿಕ ವಿಪರೀತ ಮದ್ಯಪಾನ ಮಾಡುತ್ತಿದ್ದ. ಜೈಲಿಗೆ ಹೋದ ಬಗ್ಗೆ ನೊಂದುಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


