Tuesday, June 30, 2026
Homeಕರಾವಳಿಪುತ್ತೂರಿನ ಸಿರಿಬಾಗಿಲಿನಲ್ಲಿ ಯಶಸ್ವಿಯಾಗಿ ನಡೆದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ

ಪುತ್ತೂರಿನ ಸಿರಿಬಾಗಿಲಿನಲ್ಲಿ ಯಶಸ್ವಿಯಾಗಿ ನಡೆದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ

- Advertisement -
- Advertisement -

ಪುತ್ತೂರು: ಇಲ್ಲಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರವು ಯಶಸ್ವಿಯಾಗಿ ನಡೆಯಿತು.

ಪೆರ್ಲದ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಶಿಬಿರವನ್ನು ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಅರ್ಚಕ ಪ್ರಭಾಕರ ಕಾರಂತ ಹಾಗೂ ಉಡುವ ಶಂಕರನಾರಾಯಣ ಅವರು ಜಂಟಿಯಾಗಿ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.

ಶಿಬಿರದಲ್ಲಿ ಪ್ರಖ್ಯಾತ ವೈದ್ಯರಾದ ಡಾ. ಕೃಷ್ಣ ಮೋಹನ ಪೆರ್ಲ ಹಾಗೂ ಡಾ. ಸತ್ಯನಾರಾಯಣ ಅವರು ಪಾಲ್ಗೊಂಡು ವಿವಿಧ ರೋಗಗಳಿಂದ ಬಳಲುತ್ತಿದ್ದ ರೋಗಿಗಳನ್ನು ವಿವರವಾಗಿ ತಪಾಸಣೆ ನಡೆಸಿ, ಉಚಿತವಾಗಿ ಚಿಕಿತ್ಸೆ ಮತ್ತು ಔಷಧಿಗಳನ್ನು ವಿತರಿಸಿದರು. ಈ ಆರೋಗ್ಯ ಶಿಬಿರಕ್ಕೆ ಕುಂಬಳೆಯ ಶ್ರೀ ಗೋಪಾಲಕೃಷ್ಣ ಫಾರ್ಮಸಿ, ಪುತ್ತೂರು ನೆಹರುನಗರದ ಸಂಜೀವಿನಿ ಕ್ಲಿನಿಕ್‌ನ ಡಾ. ರವಿ ನಾರಾಯಣ, ಕಬಕ ಸುಮತಿ ಕಾಂಪ್ಲೆಕ್ಸ್‌ನ ಶ್ರೀ ಸದ್ಗುರು ಡಿಸ್ಟ್ರಿಬ್ಯೂಟರ್ಸ್ ಹಾಗೂ ಬೆಂಗಳೂರಿನ ಸಿ. ಕೇಮ್. ಫಾರ್ಮಸಿ ಸಂಸ್ಥೆಗಳು ಉಚಿತವಾಗಿ ಔಷಧಿಗಳನ್ನು ಒದಗಿಸುವ ಮೂಲಕ ಪ್ರಮುಖವಾಗಿ ಸಹಕರಿಸಿದವು.

ಸುಮಾರು 80ಕ್ಕೂ ಹೆಚ್ಚು ಆಯ್ದ ಫಲಾನುಭವಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ವೆಂಕಟೇಶ ಶೆಣೈ ಕುಂಬಳೆ, ವೆಂಕಟಕೃಷ್ಣ ಭಟ್, ಸತ್ಯನಾರಾಯಣ ಹೆಗಡೆ ಹಾಗೂ ಕಿಶೋರ್ ಹೇರಳ ಉಡುವ ಅವರು ಉಪಸ್ಥಿತರಿದ್ದು ಸಹಕಾರ ನೀಡಿದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ಸುಮಿತ್ರಾ ಮಯ್ಯ ಅವರು ಶಿಬಿರದ ಒಟ್ಟಾರೆ ನಿರ್ವಹಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

- Advertisement -

Latest News

error: Content is protected !!