
ಮಂಗಳೂರು: ದಿನಾಂಕ 26-06-2026 ರಂದು ಮುಂಜಾನೆ 02-00 ಗಂಟೆ ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಅಜಾದ್ ನಗರದ 2 ನೇ ಬ್ಲಾಕ್ ನಲ್ಲಿರುವ ಶ್ರೀಮತಿ ಜಾಹೀದ್ ಎಂಬವರು ತನ್ನ ಮನೆಯ ಬೆಡ್ ರೂಮ್ ನಲ್ಲಿ ಮಲಗಿದ್ದು, ಅಪರಿಚಿತ ವ್ಯಕ್ತಿಯು ಕಿಟಿಕಿಯಲ್ಲಿ ಕೈ ಹಾಕಿ ಶ್ರೀಮತಿ ಜಾಹೀದ್ ರವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಕಳ್ಳತನ ಮಾಡಿಕೊಂಡಾಗ ಕರಿಮಣಿ ಸರ ತುಂಡಾಗಿದ್ದು, ಸುಮಾರು 20,000/-ಮೌಲ್ಯದ ಕರಿಮಣಿ ಸರದ ತುಂಡನ್ನು ಆರೋಪಿ ಕೊಂಡು ಹೋಗಿದ್ದು, ಉಳಿದ ಕರಿಮಣಿ ಸರ ಪಿರ್ಯಾದಿ ಬಳಿ ಇದ್ದು, ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಮೊ.ನಂ. 78/2026 ಕಲಂ 304 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು.
ಹಾಗೇ ದಿನಾಂಕ 27-06-2026 ರಂದು ಬೆಳಿಗ್ಗೆ 05-00 ಗಂಟೆಯಿಂದ 05-15 ಗಂಟೆ ಮದ್ಯೆ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು 8ನೇ ಬ್ಲಾಕ್ ನಲ್ಲಿರುವ ಶ್ರೀ ಫಯಾಜ್ ಎಂಬವರು ಮುಂಜಾನೆ 5-00 ಗಂಟೆಗೆ ಮಸೀದಿಗೆ ಪ್ರಾರ್ಥನೆಗೆಂದು ಹೋದಾಗ ತನ್ನ ಮನೆಯ ಬಾಗಿಲನ್ನು ಮುಚ್ಚಿಹೋಗಿದ್ದು, ಅದೇ ವೇಳೆಗೆ ಅಪರಿಚಿತ ವ್ಯಕ್ತಿಯು ಬಾಗಿಲನ್ನು ತೆರೆದು ಮನೆಯ ಒಳಗಡೆ ಪ್ರವೇಶಿಸಿ ಬೆಡ್ ರೂಮ್ ನಲ್ಲಿ ಮಲಗಿದ್ದ ಶ್ರೀಮತಿ ಅಪ್ರೀನಾ ರವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದಿದ್ದಾನೆ. ಈ ವೇಳೆ ಚಿನ್ನದ ಸರ ತುಂಡಾಗಿದ್ದು, ಸುಮಾರು 1,00,000/-ಮೌಲ್ಯದ ಚಿನ್ನದ ಸರವನ್ನು ಆರೋಪಿ ಕೊಂಡು ಹೋಗಿದ್ದು, ಚಿನ್ನದ ಸಣ್ಣ ತುಂಡು ಹಾಗೂ ಪೆಂಡೆಂಟ್ ಪಿರ್ಯಾದಿ ಬಳಿ ಇದ್ದು, ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಮೊ.ನಂ. 79/2026 ಕಲಂ 305, 304 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿರುತ್ತು.
ಮೇಲ್ಕಂಡ ಎರಡೂ ಸುಲಿಗೆ ಪ್ರಕರಣಗಳನ್ನು ಭೇದಿಸಿ ಆರೋಪಿಯ ಮಾಹಿತಿ ಸಂಗ್ರಹಿಸಿ ಆರೋಪಿ ಸುರತ್ಕಲ್ ನ ಕಾಟಿಪಳ್ಳ ನಿವಾಸಿ ಮೊಹಮ್ಮದ್ ಅಬ್ದುಲ್ ಜಾಫರ್ (28) ಎಂಬಾತನನ್ನು ದಿನಾಂಕ 29-06-2026 ರಂದು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ನ ಬಳಿಯಲ್ಲಿ ಚಿನ್ನಾಭರಣಗಳ ಸಹಿತವಾಗಿ ಬಂಧಿಸಿದ್ದಾರೆ. ಆರೋಪಿಯಿಂದ ಎರಡೂ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಚಿನ್ನಾಭರಣಗಳನ್ನು ಯಥಾ ಸ್ಥಿತಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿ ಮೊಹಮ್ಮದ್ ಅಬ್ದುಲ್ ಜಾಫರ್ ನ ವಿರುದ್ಧ ಈ ಹಿಂದೆ ದಾಖಲಾದ ಪ್ರಕರಣಗಳು
1. ಸುರತ್ಕಲ್ ಪೊಲೀಸ್ ಠಾಣೆ ಮೊ.ನಂ. 36/2025 ಕಲಂ: 326 (ಎಫ್), 324(5), 352, 351(3), 3(5) ಬಿ.ಎನ್.ಎಸ್
2. ಉರ್ವಾ ಪೊಲೀಸ್ ಠಾಣೆ ಮೊ.ನಂ. 123/2018 ಕಲಂ: 341, 323, 504, 506 ಐಪಿಸಿ.-


