
ಹೊಸದಿಲ್ಲಿ: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಬಳಿಕ, ಇತಿಹಾಸದಲ್ಲೇ ಮೊದಲ ಬಾರಿಗೆ ‘ದೇಶವೈಭವ್’, ‘ದೇಶ ವಿಭೋರ್’ ಹಾಗೂ ‘ಸಮ್ಮರ್ ಹೆರಾಲ್ಡ್’ ಹೆಸರಿನ ಮೂರು ಬೃಹತ್ ತೈಲ ಸಾಗಾಣಿಕೆ ಟ್ಯಾಂಕರ್ ಹಡಗುಗಳು ಒಂದೇ ದಿನ ಸುರಕ್ಷಿತವಾಗಿ ಹಾರ್ಮುಝ್ ಜಲಸಂಧಿಯನ್ನು ದಾಟಿ ಭಾರತದತ್ತ ಪ್ರಯಾಣ ಬೆಳೆಸಿವೆ.
ಒಟ್ಟು 8.6 ಲಕ್ಷ ಟನ್ ಕಚ್ಚಾ ತೈಲವನ್ನು ಹೊಂದಿರುವ ಈ ಹಡಗುಗಳು, ಫೆಬ್ರವರಿ 28ರಂದು ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದ ನಂತರ ಜಲಸಂಧಿಯನ್ನು ದಾಟಿದ ಮೊದಲ ಪ್ರಮುಖ ಹಡಗುಗಳಾಗಿವೆ.
ಸದ್ಯ 13 ಭಾರತೀಯ ಹಾಗೂ 5 ವಿದೇಶಿ ಹಡಗುಗಳು ಸೇರಿದಂತೆ ಒಟ್ಟು 18 ಹಡಗುಗಳು ಈ ಮಾರ್ಗವನ್ನು ದಾಟಿದ್ದು, ಇವುಗಳಲ್ಲಿ 94 ಮಂದಿ ಭಾರತೀಯ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದಾರೆ. ಇರಾನ್ ಬಂದರುಗಳ ಮೇಲಿನ ಅಮೆರಿಕದ ನಿರ್ಬಂಧಗಳ ಸಡಿಲಿಕೆ ಮತ್ತು ಉಭಯ ದೇಶಗಳ ನಡುವಿನ ಐತಿಹಾಸಿಕ ಶಾಂತಿ ಒಪ್ಪಂದದ ಬಳಿಕ ಈ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು, ಭಾರತೀಯ ಕಡಲುಮಾರ್ಗಗಳ ಹಿತಾಸಕ್ತಿ, ನಾವಿಕರ ಸುರಕ್ಷತೆ ಹಾಗೂ ದೇಶದ ಇಂಧನ ಭದ್ರತೆಗೆ ಸರ್ಕಾರ ಮೊದಲ ಆದ್ಯತೆ ನೀಡಿದೆ ಎಂದು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ.


