ಮಂಗಳೂರು:ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇವರ ಸಹಕಾರದಲ್ಲಿ ಸೌರಶಕ್ತಿ ಜೀವನೋಪಾಯ ಯೋಜನೆ , ಸೂರ್ಯ ಘರ್ ಯೋಜನೆ ಹಾಗೂ ಬ್ಯಾಂಕ್ ಸಾಲ ಸೌಲಭ್ಯ ಬಗ್ಗೆ ಮಾಹಿತಿ ಕಾರ್ಯಕ್ರಮ ಬೆಳ್ತಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಡಾ. ಬಿ . ನಾರಾಯಣ ರಾವ್ ಸಭಾಂಗಣದಲ್ಲಿ ನಡೆಯಿತು. ದಕ್ಷಿಣ ಕನ್ನಡ ಹಾಲು ಒಕ್ಕೂಟದ ಇದರ ಉಪವ್ಯವಸ್ಥಾಪಕರಾದ ಡಾ . ಸತೀಶ್ ರಾವ್ ಇವರು ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮದ ಪ್ರಯೋಜನ ರೈತರು ಪಡೆದು ಸೌರ ಶಕ್ತಿ ತಮ್ಮಲ್ಲಿ ಅಳವಡಿಸುವಲ್ಲಿ ಪ್ರಯತ್ನ ಪಡಬೇಕು ಎಂದು ಕರೆನೀಡಿದರು. ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ ಕಾರ್ಯಕ್ರಮದ ಪ್ರಸ್ತಾವನೆಯಲ್ಲಿ ಕಾರ್ಯಕ್ರಮ ಆಯೋಜನೆ ಉದ್ದೇಶ ಬಗ್ಗೆ ತಿಳಿಸಿ” ಸೌರಶಕ್ತಿ ಆಧಾರಿತ ಮಾಹಿತಿ ಪಡೆದು ನಾವೆಲ್ಲರೂ ಸೌರಶಕ್ತಿ ಅಳವಡಿಸಬೇಕು.. ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ತಿಳಿದು ಮಹಿಳೆಯರು , ರೈತರು ಸೌರಶಕ್ತಿ ಜೀವನೋಪಾಯ ಯಂತ್ರಗಳ ಬಳಕೆ ಮಾಡಲು ಕರೆನೀಡಿದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಜ್ಯೋತಿರಾಜ್ ಇವರು ಮಾತನಾಡುತ ಕೃಷಿಕರು ಬ್ಯಾಂಕ್ನಲ್ಲಿ ಸಿಗುವ ಕೃಷಿ ಸಾಲ ಸೌಲಭ್ಯ ಪಡೆದು ಸದುಪಯೋಗ ಪಡಿಸಿ, ಯುವಜನತೆ ಕೃಷಿಯಲ್ಲಿ ವಿವಿಧತೆ ಅಳವಡಿಸಿ ಹೆಚ್ಚಿನ ಆದಾಯ ಪಡೆಯಿರಿ ಎಂದರು.ಸಂಪನ್ಮೂಲ ವ್ಯಕ್ತಿಗಳಾದ ಸೆಲ್ಕೊ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ರವೀನಾ ಬಂಗೇರ ಇವರು ಸೌರಶಕ್ತಿ ಜೀವನೋಪಾಯ, ಸೂರ್ಯ ಘರ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಅಮೂಲ್ಯ ಹಣಕಾಸು ಸಾಕ್ಷರತಾ ಸಮಾಲೋಚಕರಾದ ಶ್ರೀಮತಿ ಉಷಾ ಕಾಮತ್ ಹಾಗೂ ಬೆಳ್ತಂಗಡಿ BOB ಮುಖ್ಯ ವ್ಯವಸ್ಥಾಪಕರಾದ ಶ್ರೀ ವಿನು ವರ್ಗೀಸ್ ಬ್ಯಾಂಕ್ ಸಾಲ ಸೌಲಭ್ಯ ಬಗ್ಗೆ ಮಾಹಿತಿ ನೀಡಿದರು.ದಕ್ಷಿಣ ಕನ್ನಡ ಹಾಲು ಒಕ್ಕೂಟದ ಬೆಳ್ತಂಗಡಿ ವಲಯದ ವಿಸ್ತರಣಾಧಿಕಾರಿ ಶ್ರೀ ರಾಜೇಶ್ ಇವರು ಸ್ವಾಗತಿಸಿ ವಿಸ್ತರಣಾಧಿಕಾರಿಯಾದ ಶ್ರೀ ಸಂದೀಪ್ ಧನ್ಯವಾದಗೈದರು. ಬೆಳ್ತಂಗಡಿ ಸುತ್ತಮುತ್ತಲಿನ ಹಾಲು ಉತ್ಪಾದಕ ಸಂಘದ ಅಧ್ಯಕ್ಷರು, ನಿರ್ದೇಶಕರು ರೈತರು ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾಹಿತಿ ಪಡೆದರು.


