Thursday, June 4, 2026
HomeWorldಪ್ರೀತಿಗಾಗಿ LOC ದಾಟಿದ ಪಾಕ್ ಆಕ್ರಮಿತ ಕಾಶ್ಮೀರದ ಯುವಕ

ಪ್ರೀತಿಗಾಗಿ LOC ದಾಟಿದ ಪಾಕ್ ಆಕ್ರಮಿತ ಕಾಶ್ಮೀರದ ಯುವಕ

- Advertisement -
- Advertisement -

ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದ ಯುವಕನೊಬ್ಬ ಪ್ರೀತಿಸಿದ ಹುಡುಗಿಗಾಗಿ ಗಡಿ ನಿಯಂತ್ರಣ ರೇಖೆ (LoC) ದಾಟಿ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ಗೆ ಪ್ರವೇಶಿಸಿದ ಘಟನೆ ನಡೆದಿದೆ.

ಮುಜಫರಾಬಾದ್‌ನ ಪೈಂಕಡಿ ನಿವಾಸಿ ಜೀಶಾನ್ ಅಹ್ಮದ್ ಮಿರ್ (22) ಸಾಮಾಜಿಕ ಮಾಧ್ಯಮದಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಗಡಿ ನಿಯಂತ್ರಣ ರೇಖೆ (LoC) ದಾಟಿ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ಗೆ ಪ್ರವೇಶಿಸಿದ್ದ. ಆದರೆ ಗಡಿಯಲ್ಲಿ ಆತನನ್ನು ಭಾರತೀಯ ಸೇನೆ ಬಂಧಿಸಿದೆ. ಪರಿಶೀಲನೆ ನಡೆಸಿದ ವೇಳೆ ಆತನ ಬಳಿ ಪಾಕಿಸ್ತಾನ ಗುರುತಿನ ಚೀಟಿ ಇರುವ ವಿವರಗಳು ಪತ್ತೆಯಾಗಿದ್ದು ಅಧಿಕಾರಿಗಳು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ವಿಚಾರಣೆ ವೇಳೆ ಮಾಹಿತಿ ನೀಡಿದ ಜೀಶಾನ್ ತಾನು ಕೌಟುಂಬಿಕವಾಗಿ ಮತ್ತು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಇದೇ ಸಂದರ್ಭದಲ್ಲಿ ತನಗೆ ಸ್ಕ್ಯಾಪ್‌ಚಾಟ್ (Snapchat) ಮೂಲಕ ಜಮ್ಮು-ಕಾಶ್ಮೀರದ ಉರಿ ತಾಲೂಕಿನ ತುಲ್ವಾರಿ ಗ್ರಾಮದ ಇರಮ್ ಬಾನೋ ಎಂಬ ಯುವತಿಯ ಪರಿಚಯವಾಗಿದೆ. ಈ ವೇಳೆ ಇಬ್ಬರ ಪೂರ್ವಜರು ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದರಿಂದ ನಮ್ಮ ಸ್ನೇಹ ಪ್ರೀತಿಯಾಗಿ ಬದಲಾಯಿತು. ಇದರ ಜೊತೆಗೆ ನನ್ನ ಕೌಟುಂಬಿಕ ಸಮಸ್ಯೆಯನ್ನು ಕೇಳಿದ ಯುವತಿ, “ಅಲ್ಲಿ ನರಕ ಯಾತನೆ ಅನುಭವಿಸುವ ಬದಲು ಗಡಿ ದಾಟಿ ಭಾರತಕ್ಕೆ ಬಂದುಬಿಡು” ಎಂದು ಸಲಹೆ ನೀಡಿದ್ದಾಳೆ. ಅಷ್ಟೇ ಅಲ್ಲದೆ, “ಗಡಿ ದಾಟಿದ ತಕ್ಷಣ ಭಾರತೀಯ ಸೇನೆಗೆ ಶರಣಾಗಿ ಅಕ್ರಮ ನುಸುಳುವಿಕೆಗೆ ಸಿಗುವ ಕಾನೂನುಬದ್ಧ ಶಿಕ್ಷೆಯನ್ನು ಅನುಭವಿಸಿ ಬಿಡುಗಡೆಯಾದ ನಂತರ, ಇಲ್ಲಿಯೇ ಮದುವೆಯಾಗಿ ಪೂರ್ವಜರ ಆಸ್ತಿಯನ್ನು ಪಡೆದುಕೊಂಡು ನೆಮ್ಮದಿಯಿಂದ ಬದುಕಬಹುದು” ಎಂಬ ಯೋಜನೆಯನ್ನು ಇಬ್ಬರೂ ರೂಪಿಸಿದ್ದೆವು ಎಂದು ಹೇಳಿಕೊಂಡಿದ್ದಾನೆ.

- Advertisement -

Latest News

error: Content is protected !!