Wednesday, June 3, 2026
Homeತಾಜಾ ಸುದ್ದಿಉತ್ತರಾಖಂಡದ ಕಾಡಾನೆಗಳೊಂದಿಗೆ ಪರಾರಿಯಾದ ಕರ್ನಾಟಕದ ಎರಡು ಹೆಣ್ಣು ಆನೆಗಳು

ಉತ್ತರಾಖಂಡದ ಕಾಡಾನೆಗಳೊಂದಿಗೆ ಪರಾರಿಯಾದ ಕರ್ನಾಟಕದ ಎರಡು ಹೆಣ್ಣು ಆನೆಗಳು

- Advertisement -
- Advertisement -

ಡೆಹ್ರಾಡೂನ್: ಉತ್ತರಾಖಂಡದ ಪ್ರಸಿದ್ಧ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ಗಸ್ತು ತಿರುಗುವ (ಫಾರೆಸ್ಟ್ ಪೆಟ್ರೋಲಿಂಗ್) ಕರ್ತವ್ಯಕ್ಕಾಗಿ ಕರ್ನಾಟಕದಿಂದ ಕರೆದೊಯ್ಯಲಾಗಿದ್ದ ಎರಡು ಹೆಣ್ಣು ಆನೆಗಳು ದಿಢೀರನೆ ಕಾಡು ಆನೆಗಳ ಹಿಂಡಿನೊಂದಿಗೆ ಸೇರಿ ಪರಾರಿಯಾಗಿವೆ.

ನಾಪತ್ತೆಯಾಗಿರುವ ಈ ಆನೆಗಳನ್ನು ‘ತುಂಗಾ’ ಮತ್ತು ‘ಕಪಿಲಾ’ ಎಂದು ಗುರುತಿಸಲಾಗಿದ್ದು, ಇವುಗಳನ್ನು 2017 ರಲ್ಲಿ ಕರ್ನಾಟಕದ ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರಗಳಿಂದ ಕುಮ್ಕಿ ಆನೆಗಳಾಗಿ ಬಳಸಲು ಉತ್ತರಾಖಂಡಕ್ಕೆ ಕಳುಹಿಸಿಕೊಡಲಾಗಿತ್ತು. ತಾವು ತರಬೇತಿ ಪಡೆದ ಶಿಬಿರದ ಗಡಿಗಳನ್ನು ಮೀರಿ, ಈ ಹೆಣ್ಣಾನೆಗಳು ರಾತ್ರೋರಾತ್ರಿ ಕಾಡಾನೆಗಳೊಂದಿಗೆ ಸ್ನೇಹ ಬೆಳೆಸಿ ಅವುಗಳ ಜೊತೆ ಹೊರಟುಹೋಗಿರುವುದು ಸದ್ಯ ಜಿಮ್ ಕಾರ್ಬೆಟ್ ಉದ್ಯಾನವನದ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಈ ಅನಿರೀಕ್ಷಿತ ಘಟನೆಯಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಪತ್ತೆಗಾಗಿ ತೀವ್ರ ಹುಡುಕಾಟವನ್ನು ಆರಂಭಿಸಿದ್ದಾರೆ.

- Advertisement -

Latest News

error: Content is protected !!