Tuesday, June 23, 2026
HomeUncategorizedಮಂಗಳೂರು : ಮುಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ ಆರೋಪಿಗಳ ಬಂಧನ

ಮಂಗಳೂರು : ಮುಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ ಆರೋಪಿಗಳ ಬಂಧನ

- Advertisement -
- Advertisement -

ಮಂಗಳೂರು : ಮುಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ ಆರೋಪಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿದ್ದು
ಆರೋಪಿಗಳಿಂದ ಕಳುವಾದ ಬೈಕ್‌ ಹಾಗೂ 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಸುರತ್ಕಲ್ ಮುಕ್ಕ ನಿವಾಸಿ ಮೊಹಮ್ಮದ್ ರಾಝಿಕ್ ಪ್ರಾಯ (36), ಬೈಕಂಪಾಡಿ ಅಂಗರಗುಂಡಿ ನಿವಾಸಿ ಉಬೈದತ್ ಹೈದರ್(31) ಬಂಧಿತ ಆರೋಪಿಗಳು.

ಆರೋಪಿಗಳು ದಿನಾಂಕ 18-05-2026 ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಲ್ಕಿ ಜಂಕ್ಷನ್ ಬಳಿ ಅಪೋಲೊ ಫಾರ್ಮಾ ಹತ್ತಿರ ನಿಲ್ಲಿಸಿದ ಹೋಂಡಾ ಯುನಿಕಾರ್ನ್ (ಕೆಎ 20 ಇಬಿ 6383) ಬೈಕ್ ಅನ್ನು ಆರೋಪಿಗಳು ಕಳ್ಳತನ ಮಾಡಿದ್ದರು. ಆರೋಪಿಗಳಿಂದ ಸುಮಾರು 20000/- ರೂ ಮೌಲ್ಯದ ಕಳುವಾದ ಕೆಎ 20 ಇಬಿ 6383 ಹೋಂಡಾ ಯುನಿಕಾರ್ನ್ ಬೈಕ್ ಹಾಗೂ ಸುಮಾರು 18000/- ರೂ ಮೌಲ್ಯದ ಮೊಬೈಲ್ ಪೋನಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮುಲ್ಕಿ ಠಾಣೆಯ ಪಿಎಸ್‌ಐ ಹಾಗೂ ಕ್ರೈಂ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ.

ಆರೋಪಿಗಳ ಮೇಲೆ ಈ ಕೆಳಗಿನಂತೆ ಪ್ರಕರಣ ದಾಖಲಾಗಿರುತ್ತದೆ.

1.ಮೊಹಮ್ಮದ್ ರಾಝಿಕ್ :
1.ಸುರತ್ಕಲ್ ಠಾಣಾ ಅಕ್ರ ನಂಬ್ರ 98/2024 ಕಲಂ 27ಬಿ ಎನ್ ಡಿಪಿಎಸ್ ಕಾಯಿದೆ.
2.ಪಣಂಬೂರು ಠಾಣಾ ಅಕ್ರ ನಂಬ್ರ 88/2019 ಕಲಂ 27ಬಿ ಎನ್ ಡಿಪಿಎಸ್ ಕಾಯಿದೆ.
3.ಮುಲ್ಕಿ ಠಾಣಾ ಅಕ್ರ ನಂಬ್ರ 110/2023 ಕಲಂ 27ಬಿ ಎನ್ ಡಿಪಿಎಸ್ ಕಾಯಿದೆ.

2.ಉಬೈದತ್ ಹೈದ‌ರ್
1.ಪಣಂಬೂರು ಪೊಲೀಸ್ ಠಾಣಾ ಅಕ್ರ ನಂಬ್ರ. 03/2002 ಕಲಂ: 143, 147, 148, 341, 323, 324, 504, 506 ಜೊತೆಗೆ 149 ಐಪಿಸಿ.
2.ಪಣಂಬೂರು ಪೊಲೀಸ್ ಠಾಣಾ
ಅಕ್ರ ನಂಬ್ರ 42/2014 ಕಲಂ : 148, 341, 323, 324, 504, 506 ಜೊತೆಗೆ 149 ಐಪಿಸಿ.
3.ಪಣಂಬೂರು ಪೊಲೀಸ್ ಠಾಣಾ ಅ ಕ್ರ ನಂಬ್ರ 42/2014 ಕಲಂ:143, 147, 341, 323, 427, 506 ಜೊತೆಗೆ 149 ಐಪಿಸಿ.
4.ಪಣಂಬೂರು ಪೊಲೀಸ್ ಠಾಣಾ ಅ ಕ್ರ ನಂಬ್ರ 140/2014 ಕಲಂ:45/2016 143, 147, 341, 323, 324, 504, 506 ಜೊತೆಗೆ 149 ಐಪಿಸಿ.

- Advertisement -

Latest News

error: Content is protected !!