Tuesday, June 23, 2026
Homeಅಪರಾಧಬೆಳಾಲು ಸೊಸೈಟಿ ಹಗರಣ: ಪ್ರಕರಣ ಆರೋಪಿ ಪ್ರಶಾಂತ್ ಮೇಲೆ ವಿಘ್ನೇಶ್ ಗೌಡ ಹಲ್ಲೆ

ಬೆಳಾಲು ಸೊಸೈಟಿ ಹಗರಣ: ಪ್ರಕರಣ ಆರೋಪಿ ಪ್ರಶಾಂತ್ ಮೇಲೆ ವಿಘ್ನೇಶ್ ಗೌಡ ಹಲ್ಲೆ

- Advertisement -
- Advertisement -

ಬೆಳ್ತಂಗಡಿ : ಬೆಳಾಲು ಸಿಎ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಶಾಂತ್ ಮೇಲೆ ವಿಘ್ನೇಶ್ ಗೌಡ ಎಂಬಾತ ಹಲ್ಲೆ ನಡೆಸಿ ಗಾಯಗೊಳಿಸಿ ಅವಾಚ್ಯ ಶಬ್ಧಗಳಿಂದ ಬೈದಿರುವುದಾಗಿ ಪ್ರಶಾಂತ್ ನೀಡಿದ ದೂರಿನ ಮೆರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿ ವಿಘ್ನೇಶ್ ಗೌಡ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.

ಈ ಘಟನೆ ಬಗ್ಗೆ ದೂರುದಾರ ಆರೋಪಿ ಬಂದಾರು ಗ್ರಾಮದ ಬೈದ್ರೊಟ್ಟು ನಿವಾಸಿ ಪ್ರಶಾಂತ್ ಧರ್ಮಸ್ಥಳ ಠಾಣೆಗೆ ದೂರು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಅನುಮತಿಯ ಆದೇಶ ದೊರೆತ ಬಳಿಕ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನಲೆ: ಬೆಳ್ತಂಗಡಿ ತಾಲೂಕಿನ ಬೆಳಾಲು ಸೊಸೈಟಿಗೆ ಬಂದಿದ್ದ ಎ.22 ರಂದು ಬಂದಿದ್ದ ಪ್ರಶಾಂತ್ ತನ್ನ ಕೆಲಸ ಮುಗಿಸಿ ಸೊಸೈಟಿಯಿಂದ ಹೊರಗೆ ಬಂದಾಗ ಸೊಸೈಟಿ ವಠಾರದಲ್ಲಿದ್ದ ತನ್ನಪರಿಚಯಸ್ತ ವಿಘ್ನೇಶ್ ಗೌಡ ಎಂಬಾತನು ಪ್ರಶಾಂತ್ ಬಳಿ ಬಂದು “ನನ್ನ ಬಂಗಾರ ಎಲ್ಲಿ” ಎಂದು ಜಗಳ ತೆಗೆದು ಆತನಿಗೆ ಕೈಯಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಆರೋಪಿ ವಿಘ್ನೇಶ್ ಗೌಡ ಕೈಯಿಂದ ಹಲ್ಲೆ ಮಾಡಿದಾಗ ಪ್ರಶಾಂತ್ ಕೈ ಅಡ್ಡ ಇಟ್ಟಾಗ ಆತನ ಕೈ ಬೆರಳಿಗೆ ಗಾಯವಾಗಿದ್ದ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೇ.15 ರಂದು ಬಿಎನ್‌ಎಸ್ ೧೧೫(೨), ೩೫೨ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!