Monday, June 22, 2026
Homeಕರಾವಳಿಮಂಗಳೂರುಬೆಳ್ತಂಗಡಿ;ಕಣಿಯೂರು ಬಿಜೆಪಿ ಯುವ ಮೋರ್ಚಾ ವತಿಯಿಂದ ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ರೈತ ಸಭಾಭವನದಲ್ಲಿ ವಿಶ್ವ ಯೋಗ...

ಬೆಳ್ತಂಗಡಿ;ಕಣಿಯೂರು ಬಿಜೆಪಿ ಯುವ ಮೋರ್ಚಾ ವತಿಯಿಂದ ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ರೈತ ಸಭಾಭವನದಲ್ಲಿ ವಿಶ್ವ ಯೋಗ ದಿನ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ

- Advertisement -
- Advertisement -

ಬೆಳ್ತಂಗಡಿ;ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ಇಚ್ಛಾಶಕ್ತಿಯ ಫಲವಾಗಿ ಯೋಗ ವಿಶ್ವವ್ಯಾಪಿಯಾಗಿದೆ. ಜಗತ್ತನ್ನು ಯೋಗ ಆವರಿಸಿದೆ ಎಂದರೂ ಅತಿಶಯವಿಲ್ಲ. ಯೋಗ ಕೇವಲ ದೈಹಿಕ ಶಕ್ತಿಗಷ್ಟೇ ಅಲ್ಲ, ಮಾನಸಿಕ ಶಕ್ತಿಗೂ ಅತಿಮುಖ್ಯ. ಹಿಂದೂ ಪರಂಪರೆಯ ಶ್ರೇಷ್ಠತೆಯ ಭಾಗವಾಗಿರುವ ಯೋಗವನ್ನು ನಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳೋಣ. ಅನ್ನುವ ಧ್ಯೇಯ ದೊಂದಿಗೆ ಬಿಜೆಪಿ ಯುವಮೋರ್ಚಾ ಕಣಿಯೂರು ಮಹಾಶಕ್ತಿ ಕೇಂದ್ರದ ವತಿಯಿಂದ ಜೂ 21 ರಂದು  ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ರೈತ ಸಭಾಭವನದಲ್ಲ ವಿಶ್ವ ಯೋಗ ದಿನಾಚರಣೆ  ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಕಣಿಯೂರು ಗ್ರಾಮ ಮುಗೆರೋಡಿ ಶ್ರೀಮತಿ ಮಂಜುಳಾ ಮತ್ತು ಪುರುಷೋತ್ತಮ ಗೌಡ ಇವರ ಸುಪುತ್ರಿ ಕು.ಅದಿತಿ ಯೋಗಾಸನದಲ್ಲಿ 2024 ರಲ್ಲಿ ಇಂಡಿಯ ಬುಕ್ ಆಫ್ ರೆಕಾರ್ಡ್ಸ್  ಸಾಧನೆ ಮಾಡಿದ ಸಾಧಕಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ  ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಪ್ರಸಾದ್ ಗೌಡ ಕಡಮ್ಮಾಜೆ, ಉಪಾಧ್ಯಕ್ಷರಾದ ಪ್ರಕಾಶ್ ಬಾರ್ಯ, ಕಾರ್ಯದರ್ಶಿ ಗಿರೀಶ್ ಗೌಡ ಬಿ. ಕೆ. ಬಂದಾರು, ಯುವ ವಕೀಲರು ಪಕ್ಷದ ಪ್ರಮುಖರಾದ ಯತೀಶ್ ಶೆಟ್ಟಿ ಪಣೆಕ್ಕರ,ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೇoಕ್ಯಾರ್, ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷರಾದ ಅಶೋಕ್ ಗೌಡ ಪಾಂಜಾಳ, ನಿರ್ದೇಶಕರು ಯುವ ವಕೀಲರಾದ ಉದಯ್ ಕುಮಾರ್ ಬಿ. ಕೆ. ಕಣಿಯೂರು ಪಂಚಾಯತ್ ಮಾಜಿ ಅಧ್ಯಕ್ಷರಾದ ಸೀತಾರಾಮ ಮಡಿವಾಳ,ಪ್ರಮುಖರಾದ ಮಹಾಬಲ ಗೌಡ ಬಂದಾರು,ವಿಠ್ಠಲ್ ಶೆಟ್ಟಿ ಕೊಲ್ಲೊಟ್ಟು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Latest News

error: Content is protected !!