Thursday, June 4, 2026
Homeತಾಜಾ ಸುದ್ದಿವಿಧಾನ ಪರಿಷತ್ 7 ಸ್ಥಾ‌ನಗಳಿಗೆ ಚುನಾವಣೆ ಘೋಷಣೆ

ವಿಧಾನ ಪರಿಷತ್ 7 ಸ್ಥಾ‌ನಗಳಿಗೆ ಚುನಾವಣೆ ಘೋಷಣೆ

- Advertisement -
- Advertisement -

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆ ಘೋಷಣೆಯಾಗಿದೆ. ಜೂನ್ 30 ರಂದು ತೆರವಾಗಲಿರುವ ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಜೂನ್ 18 ರಂದು ಚುನಾವಣಾ ದಿನಾಂಕ ನಿಗದಿಯಾಗಿದ್ದು, ಜೂನ್ 1 ರಂದು ಅಧಿಸೂಚನೆ ಹೊರಬೀಳಲಿದೆ.

ಕಾಂಗ್ರೆಸ್ 3, ಬಿಜೆಪಿ 3 ಮತ್ತು ಜೆಡಿಎಸ್ 1 ಸದಸ್ಯರ ಅವಧಿ ಮುಕ್ತಾಯವಾಗಲಿದೆ. ಕಾಂಗ್ರೆಸ್ ನಿಂದ ಬಿ.ಕೆ. ಹರಿಪ್ರಸಾದ್, ನಸೀರ್ ಅಹಮದ್ ಮತ್ತು ತಿಪ್ಪಣ್ಣ ಕಮಕನೂರು ಅವಧಿ ಮುಕ್ತಾಯವಾಗಲಿದೆ.

ಬಿಜೆಪಿಯಿಂದ ಪ್ರತಾಪ ಸಿಂಹ ನಾಯಕ್, ಸುನೀಲ್ ವಲ್ಯಾಪುರೆ ಮತ್ತು ಎಂಟಿಬಿ ನಾಗರಾಜ್ ಮತ್ತು ಜೆಡಿಎಸ್ ನಿಂದ ಗೋವಿಂದರಾಜ್ ಅವಧಿ ಮುಗಿಯಲಿದೆ.

- Advertisement -

Latest News

error: Content is protected !!