Tuesday, June 23, 2026
Homeಕರಾವಳಿಖ್ಯಾತ ಧರ್ಮಗುರು ಮೊನ್ಸಿಂಜೊರ್ ಲೆಸ್ಲಿ ಶೆಣೈ ನಿಧನ

ಖ್ಯಾತ ಧರ್ಮಗುರು ಮೊನ್ಸಿಂಜೊರ್ ಲೆಸ್ಲಿ ಶೆಣೈ ನಿಧನ

- Advertisement -
- Advertisement -

ಮಂಗಳೂರು: ಉರ್ವಾ ಮೂಲದ ಖ್ಯಾತ ಧರ್ಮಗುರು ಮೊನ್ಸಿಂಜೊರ್ ಲೆಸ್ಲಿ ಶೆಣೈ (79) ಅವರು ರವಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.

1947ರ ಅಕ್ಟೋಬರ್ 4ರಂದು ಉರ್ವಾದಲ್ಲಿ ಜನಿಸಿದ ಇವರು, ತಮ್ಮ ವಿನಯಶೀಲ ಸ್ವಭಾವ ಹಾಗೂ ನಿರಂತರ ಸೇವಾ ಕಾರ್ಯಗಳ ಮೂಲಕ ಜನಪ್ರಿಯರಾಗಿದ್ದರು. 1976ರ ಮೇ 14ರಂದು ಕೋಲ್ಕೋತಾ ಮಹಾಧರ್ಮಪ್ರಾಂತ್ಯದ ಧರ್ಮಗುರುವಾಗಿ ದೀಕ್ಷೆ ಪಡೆದ ಅವರು, ಬಳಿಕ 1979ರಿಂದ ಅಮೆರಿಕದ ಫ್ರೆಸ್ನೋ ಧರ್ಮಪ್ರಾಂತ್ಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದರು. 1985ರಲ್ಲಿ ಅಮೆರಿಕದ ಪೌರತ್ವವನ್ನು ಪಡೆದುಕೊಂಡಿದ್ದರೂ ಸಹ, ಅವರು ತಮ್ಮ ಹುಟ್ಟೂರಿನೊಂದಿಗೆ ಸದಾ ನಿಕಟ ಸಂಪರ್ಕವನ್ನು ಹೊಂದಿದ್ದರು. \

- Advertisement -

Latest News

error: Content is protected !!