- Advertisement -
![]()
- Advertisement -
ಸುಳ್ಯ; ಮರಿಯಾನೆಯೊಂದು ತೋಟದಲ್ಲಿ ಸಾವನ್ನಪ್ಪಿದ ಘಟನೆ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ತಲೆ ಸಮೀಪದ ಬೆದ್ರುಪಣೆ ಎಂಬಲ್ಲಿ ನಡೆದಿದೆ.
ಸುಮಾರು 1 ವರ್ಷ ಪ್ರಾಯದ ಗಂಡು ಮರಿಯಾನೆಯಾಗಿದ್ದು, ದೊಡ್ಡ ಆನೆಗಳ ದಾಳಿಯಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಎನ್ನಲಾಗುತ್ತಿದೆ. ನಿಖರವಾದ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ನಿಖರ ಮಾಹಿತಿ ಗೊತ್ತಾಗಲಿದೆ.
- Advertisement -


