Sunday, June 7, 2026
HomeUncategorizedವಿಟ್ಲ; ಅಕ್ರಮ ಗೋಸಾಗಾಟ ಮಾಡುತ್ತಿದ್ದ ಓರ್ವನ ಬಂಧನ, ಮತ್ತೋರ್ವ ಪರಾರಿ

ವಿಟ್ಲ; ಅಕ್ರಮ ಗೋಸಾಗಾಟ ಮಾಡುತ್ತಿದ್ದ ಓರ್ವನ ಬಂಧನ, ಮತ್ತೋರ್ವ ಪರಾರಿ

- Advertisement -
- Advertisement -

ವಿಟ್ಲ; ಅಕ್ರಮ ಗೋಸಾಗಾಟ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಬಂಟ್ವಾಳ ಕೊಳ್ನಾಡು ಪಂಜರಕೋಡಿ ಎಂಬಲ್ಲಿ ನಡೆದಿದೆ. ಬಶೀರ್ ಬಂಧಿತ ಆರೋಪಿ.

ದಿನಾಂಕ:21.05.2026 ರಂದು ಬೆಳಿಗ್ಗೆ, ಅಕ್ರಮ ಗೋಸಾಟದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು (ಕಾ&ಸು) ರಾಮಕೃಷ್ಣ ರವರಿಗೆ ಮಾಹಿತಿ ಬಂದ ಮೇರೆಗೆ,  ಅವರು ಸಿಬ್ಬಂದಿಯೊಂದಿಗೆ ತೆರಳಿ KA-19-D-1496ನೇ ನೋಂದಣಿಯ ಪಿಕ್ ಅಪ್ ವಾಹನವನ್ನು ತಡೆದು ನಿಲ್ಲಿಸಿರುತ್ತಾರೆ.  ಈ ವೇಳೆ ಆ ವಾಹನಕ್ಕೆ ಬೆಂಗಾವಲಾಗಿ ಬಂದಿದ್ದ KA-21-MA-0801 ನೇ ಸ್ವೀಪ್ಟ್ ಕಾರಿನಲ್ಲಿದ್ದ ಆರೋಪಿತ ಬಶೀರ್ ಎಂಬಾತನು ಸ್ಥಳದಲ್ಲಿದ್ದ ಪೊಲೀಸರ ಪ್ರಾಣಕ್ಕೆ ಅಪಾಯವಾಗುವಂತೆ ತನ್ನ ಕಾರನ್ನು ಚಲಾಯಿಸಿಕೊಂಡು ಹೋಗಿ ಪರಾರಿಯಾಗಿರುತ್ತಾನೆ. ಬಳಿಕ ಜಾನುವಾರು ಸಾಗಿಸುತ್ತಿದ್ದ ಪಿಕ್ ಅಪ್ ನ್ನು ಪರಿಶೀಲಿಸಿದಾಗ ಎರಡು ಜಾನುವಾರುಗಳನ್ನು ಹಿಂಸಾತ್ಮಕ ಕಟ್ಟಿರುವುದು ಪತ್ತೆಯಾಗಿರುತ್ತದೆ. ಈ ಬಗ್ಗೆ ಪಿಕ್ ಅಪ್ ಚಾಲಕ ಬಂಟ್ವಾಳ ಬಾಳೆಪುಣಿ ನಿವಾಸಿ ಮೊಹಮ್ಮದ್ ಹನೀಪ್ (44) ಎಂಬಾತನಲ್ಲಿ ವಿಚಾರಿಸಿದಾಗ ಯಾವುದೇ ಪರವಾನಿಗೆ ಪಡೆಯದೇ ಜಾನುವಾರುಗಳನ್ನು ವಧೆ ಮಾಡಲು ಸಾಗಿಸುತ್ತಿರುವುದಾಗಿ ತಿಳಿಸಿರುತ್ತಾನೆ. ಮುಂದಿನ ಕಾನೂನು ಕ್ರಮಕ್ಕಾಗಿ ಚಾಲಕನನ್ನು ವಶಕ್ಕೆ ಪಡೆದು, ಕೃತ್ಯಕ್ಕೆ ಬಳಸಿದ ವಾಹನ, ಎರಡು ಜಾನುವಾರುಗಳನ್ನು ಸ್ವಾಧೀನಪಡಿಸಿಕೊಂಡು, ಆರೋಪಿ ಚಾಲಕ ಮೊಹಮ್ಮದ್ ಹನೀಪ್ ಹಾಗೂ ಬಶೀರ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 114/2026, ಕಲಂ:118(1), 109, 132  ಜೊತೆಗೆ 3(5) ಬಿ.ಎನ್.ಎಸ್ -2023 ಕಾಯ್ದೆ, ಕಲಂ 5, 7, 12   ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧ ಮತ್ತು ಸಂರಕ್ಷಣಾ ಅಧಿನಿಯಮ 2020 ಹಾಗೂ  ಕಲಂ   11   The Prevention of Cruelty to Animals Act 1960 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!