Wednesday, June 3, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಧರ್ಮಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

- Advertisement -
- Advertisement -

ಬೆಳ್ತಂಗಡಿ : ಅಪರಿಚಿತ ಗಂಡಸಿನ ಮೃತದೇಹವು ಮೇ.20 ರಂದು ಬೆಳಿಗ್ಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಗೋದಾವರಿ ವಸತಿಗೃಹದ ಬಳಿಯ ಪಾರ್ಕಿಂಗ್‌ ಸ್ಥಳದಲ್ಲಿ ಸುಮಾರು 50 ರಿಂದ 55 ವರ್ಷ ಪ್ರಾಯ ಅಪರಿಚಿತ ಗಂಡಸು ಯಾವುದೋ ಖಾಯಿಲೆ ಅಥವಾ ಹೃದಯಘಾತಗೊಂಡು ಮೃತಪಟ್ಟಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರ ವಯಸ್ಸು ಸುಮಾರು 50-55 ವರ್ಷ, ಎತ್ತರ 5.4 ಅಡಿ, ಧೃಡಕಾಯ ಶರೀರ, ಎಣ್ಣೆಕಪ್ಪು ಮೈಬಣ್ಣ, ದುಂಡು ಮುಖ, ತಲೆಯಲ್ಲಿ ಕೂದಲು ಮುಖದಲ್ಲಿ ಗಡ್ಡ-ಮೀಸೆಯನ್ನು ಬೊಳಿಸಿರುತ್ತಾರೆ ಎಡಕಾಲಿನ ತೊಡೆಯಲ್ಲಿ ಕಪ್ಪು ಮಚ್ಚೆ ಗುರುತು ಇದ್ದು, ಮೃತದೇಹದ ಮೈಮೇಲೆ ಬಿಳಿ ಬಣ್ಣದ ಅರ್ಧ ತೋಳಿನ ಶರ್ಟ್‌ ಮತ್ತು ನೀಲಿ, ಕಂದು ಮತ್ತು ಬಿಳಿ ಬಣ್ಣದಲ್ಲಿ ಚೌಕಳಿ ಇರುವ ಲುಂಗಿ ಮತ್ತು POOMEX ಎಂದು ಬರೆದಿರುವ ಒಳ ಚಡ್ಡಿ ಧರಿಸಿರುತ್ತಾರೆ.

ಮೃತರ ವಾರಸುದಾರರು ಪತ್ತೆಯಾದಲ್ಲಿ 08256 277253, E-Mail ID [email protected] , PSI DHARMASTHALA: 7795424204, 8277986449. CPI BELTHANGADY: 9480805336, Dist Control: 0824-2220500, ಗೆ ಸಂಪರ್ಕಿಸಬೇಕಾಗಿ ಧರ್ಮಸ್ಥಳ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!